3 ಕೋಟಿ ಉಂಡೆ ನಾಮ ಹಾಕಿದ್ದ ವಂಚಕನನ್ನು ರೌಂಡ್ ಅಪ್ ಮಾಡಿದ ಹೂಡಿಕೆದಾರರು:ಸಿಐಡಿ ಪೊಲೀಸರಿಂದ ಗ್ರಿಲ್

ಶನಿವಾರ, 11 ಸೆಪ್ಟಂಬರ್ 2021 (20:26 IST)
ಬೆಂಗಳೂರು: ಆರ್.ಸಿ  ಹಾಗೂ ಇತರ ದಾಖಲೆಗಳನ್ನು ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಸಿದ್ಧಪಡಿಸುವ ಟೆಂಡರ್ ಮೂಲಕ ಉಂಡೆ ನಾಮ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯನ್ನು ವಂಚನೆಗೊಳಗಾದವರೇ ರೌಂಡ್ ಅಪ್ ಮಾಡಿ ಪೊಲೀಸರಿಗೆ ಒಪ್ಪಿಸಿರುವ ಘಟನೆ ಹೈಗ್ರೌಂಡ್ಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
 
 
ವಿವೇಕ್ ನಾಗಪಾಲ್ ಬಂಧಿತ ಆರೋಪಿಯಾಗಿದ್ದಾನೆ. ಈ ಹಿಂದೆ ರೋಸ್ ಮರ್ಟಾ ಟೆಕ್ನಾಲಜೀಸ್ ಹೆಸರಿನ ಕಂಪೆನಿಯಿಂದ  ಡಿ.ಎಲ್, ಆರ್.ಸಿ ದಾಖಲೆಗಳನ್ನು ಸ್ಮಾರ್ಟ್ ಕಾರ್ಡ್ ರೂಪದಲ್ಲಿ ಸಿದ್ಧಪಡಿಸುವ ಟೆಂಡರ್ ಪಡೆದಿತ್ತು.ಈ ಮೂಲಕ ವಿವಿಧ ಪ್ರಾಜೆಕ್ಟ್ ಕೊಡುವುದಾಗಿ ನಂಬಿಸಿ, ಪ್ರಮುಖ ಆರೋಪಿ ವಿವೇಕ್ ನಾಗಪಾಲ್ 2016 ರಲ್ಲಿ ಸಾಕಷ್ಟು ಹೂಡಿಕೆದಾರರಿಂದ ಸುಮಾರು 13 ಕೋಟಿ ಹಣ ಪಡೆದಿರುವ ಆರೋಪ ಕೇಳಿ ಬಂದಿತ್ತು. ನಂತರ  ಪ್ರಾಜೆಕ್ಟ್ ಯಾವುದೇ ಪ್ರಾಜೆಕ್ಟ್ ನೀಡಿಲ್ಲ. ಕೊಟ್ಟ ಹಣ ಕೂಡ  ವಾಪಸ್ ನೀಡದೇ ಇದ್ದಾಗ ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿತ್ತು. 
 
ಪೊಲೀಸರಿಂದ ಗ್ರಿಲ್: 
 
ಬಹುಕೋಟಿ ವಂಚನೆ ಆರೋಪದಡಿ ಈ ಪ್ರಕರಣ  ಸಿಐಡಿಗೆ ವರ್ಗಾವಣೆಯಾಗಿತ್ತು. ನಂತರ ಆರೋಪಿ ವಿವೇಕ್ ನಾಗಪಾಲ್ ಪೊಲೀಸರಿಗೆ ಸಿಗದೇ ಎಸ್ಕೇಪ್ ಆಗಿದ್ದ. ಪ್ರಕರಣದ  ಕುರಿತು ವಂಚನೆಗೊಳಗಾದವರನ್ನು ಸಿಐಡಿ ಪೊಲೀಸರು ವಿಚಾರಣೆಗೆ ಕರೆದಿದ್ದರು. ಈ ನಡುವೆ  ವಂಚನೆಗೊಳಗಾದ ಹೂಡಿಕೆದಾರರು ಗುರುವಾರ  ಖಾಸಗಿ ಫೈವ್ ಸ್ಟಾರ್ ಹೊಟೇಲ್‍ನಲ್ಲಿ ವಿವೇಕ್ ನಾಗಪಾಲ್ ನನ್ನು ನೋಡಿ ಸಿಐಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಂಚನೆ ಪ್ರಕರಣ ಸಂಬಂಧ ಆರೋಪಿ ನಾಗಪಾಲ್ ಜತೆಗೆ ಮಾತಿನ ಚಕಮಕಿ ಕೂಡ ನೆಡೆದಿದೆ. ನಂತರ ಹೈಗ್ರೌಂಡ್ಸ್ ಪೊಲೀಸರಿಗೆ ವಂಚನೆಗೊಳಗಾದವರೇ ವಿವೇಕ್ ನಾಗಪಾಲ್ ನನ್ನು ಹಿಡಿದು ಇದೀಗ ಒಪ್ಪಿಸಿದ್ದಾರೆ. ಸದ್ಯ ಸಿಐಡಿ ಇನ್ಸ್ ಪೆಕ್ಟರ್ ಪ್ರವೀಣ್ ಎಲೆಗಾರ್ ಹೈಗ್ರೌಂಡ್ಸ್ ಠಾಣೆಗೆ ಭೇಟಿ ನೀಡಿ  ವಿವೇಕ್ ನಾಗಪಾಲ್ ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
k

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ