ಇಡೀ ಸ್ಯಾಂಡಲ್ವುಡ್ನಲ್ಲೇ ಸಂಚಲನ ಮೂಡಿಸಿದ್ದ ಮೀಟೂ ಕೇಸ್ ಮತ್ತೆ ಆ್ಯಕ್ಟೀವ್
2018ರಲ್ಲಿ ಇಡೀ ಸ್ಯಾಂಡಲ್ವುಡ್ನಲ್ಲೇ ಸಂಚಲನ ಮೂಡಿಸಿದ್ದ ಮೀಟೂ ಕೇಸ್ ಮತ್ತೆ ಆ್ಯಕ್ಟೀವ್ ಆಗಿದೆ. ಎಲ್ಲವೂ ಮುಗಿದಿದೆ, ಕ್ಲೀನ್ ಚಿಟ್ ಸಿಗುತ್ತೆ ಅಂತ ಕಾಯ್ತಿದ್ದವರಿಗೆ ಮತ್ತೆ ಸಂಕಷ್ಟ ಎದುರಾಗಿದೆ. ಗೃಹ ಸಚಿವ ಅರಗ ಜ್ಞಾನೇಂದ್ರ ಅದ್ಯಾವಾಗ ಬಾಕಿ ಉಳಿದ ಕೇಸ್ ಕ್ಲಿಯರ್ ಮಾಡಿ ಅಂದ್ರೋ ಮೀಟೂ ಕೇಸ್ ಕೂಡ ಮರು ಜೀವ ಪಡೆದುಕೊಂಡಿದೆ. ಈ ಕೇಸ್ನಲ್ಲಿ ಪ್ರಮುಖವಾಗಿದ್ದ ನಿರ್ದೇಶಕ ಅರುಣ್, ನಿರ್ಮಾಪಕ ಜಯರಾಮ್, ಕ್ಯಾಮೆರಾಪರ್ಸನ್ ಕೃಷ್ಣ ಹೇಳಿಕೆ ನೀಡದೆ ಪ್ರಕರಣ ಹಾಗೇ ನೆನೆಗುದಿಗೆ ಬಿದ್ದಿತ್ತು. ನೋಟೀಸ್ ಕೊಟ್ಟರು ಬಾರದ ಈ ಮೂವರನ್ನು ಇದೀಗ ಪೊಲೀಸರು ಮತ್ತೆ ಕರೆಸಿ ಹೇಳಿಕೆ ಪಡೆದುಕೊಳ್ಳಲೇಬೇಕಾಗಿದೆ. ಈ ಮೂವರ ಹೇಳಿಕೆ ಮೇಲೆ ಕ್ಲೀನ್ ಚಿಟ್ ಕೊಡ್ತಾರಾ, ಚಾರ್ಜ್ಶೀಟ್ ಸಲ್ಲಿಕೆಯಾಗುತ್ತಾ ಅನ್ನೋದು ಡಿಪೆಂಟ್ ಆಗಿದೆ.