ರೇಣುಕಾಸ್ವಾಮಿ ಸಹೋದರಿಗೆ ಸರ್ಕಾರಿ ಉದ್ಯೋಗ: ಸಿಎಂ ಸಿದ್ದರಾಮಯ್ಯ ನಿರ್ಧಾರ ಸರೀನಾ

Krishnaveni K

ಮಂಗಳವಾರ, 25 ಜೂನ್ 2024 (16:03 IST)
ಬೆಂಗಳೂರು: ನಟ ದರ್ಶನ್ ಮತ್ತು ಗ್ಯಾಂಗ್ ನಿಂದ ಹಲ್ಲೆಗೊಳಗಾಗಿ ಹತ್ಯೆಗೀಡಾದ ರೇಣುಕಾಸ್ವಾಮಿ ಸಹೋದರಿಗೆ ಸರ್ಕಾರಿ ಉದ್ಯೋಗ ನೀಡುವುದಾಗಿ ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ. ಈ ಬಗ್ಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಪರ-ವಿರೋಧ ಚರ್ಚೆಗಳಾಗುತ್ತಿವೆ.

ರೇಣುಕಾಸ್ವಾಮಿ ಕೂಡಾ ಅಮಾಯಕನೇನಲ್ಲ. ಆತನಿಗೆ ಸೋಷಿಯಲ್ ಮೀಡಿಯಾದಲ್ಲಿ ಹುಡುಗಿಯರಿಗೆ, ಸೆಲೆಬ್ರಿಟಿಗಳಿಗೆ ಅಶ್ಲೀಲ ಸಂದೇಶ ಕಳುಹಿಸುವ ಚಟವಿತ್ತು ಎಂದು ಈಗಾಗಲೇ ಸುದ್ದಿ ಹರಡಿದೆ. ಇದಕ್ಕೆ ತಕ್ಕಂತೆ ಇತ್ತೀಚೆಗೆ ನಟಿಯೊಬ್ಬರು ತಮಗೂ ರೇಣುಕಾಸ್ವಾಮಿ ಅಶ್ಲೀಲ ಮೆಸೇಜ್ ಕಳುಹಿಸುತ್ತಿದ್ದ. ಅದಕ್ಕೇ ಆತನನ್ನು ಬ್ಲಾಕ್ ಮಾಡಿದ್ದೆ ಎಂದಿದ್ದರು.

ರೇಣುಕಾಸ್ವಾಮಿ ಪೋಷಕರಿಗೆ ಆತನ ದುಡಿಮೆಯೇ ಆಧಾರವಾಗಿತ್ತು. ಈಗ ರೇಣುಕಾಸ್ವಾಮಿ ಹತ್ಯೆಯಾಗಿರುವುದರಿಂದ ಕುಟುಂಬಸ್ಥರಿಗೆ ಸಂಸಾರ ಸಾಗಿಸುವುದು ಕಷ್ಟವಾಗಿದೆ. ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿದ ರೇಣುಕಾಸ್ವಾಮಿ ಪೋಷಕರು ಆತನ ಸಹೋದರಿಗೆ ಸರ್ಕಾರಿ ಉದ್ಯೋಗ ನೀಡುವಂತೆ ಮನವಿ ಮಾಡಿದರು. ಇದಕ್ಕೆ ಸಿಎಂ ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

ಆದರೆ ಇದಕ್ಕೆ ಕೆಲವರಿಂದ ಸೋಷಿಯಲ್ ಮೀಡಿಯಾದಲ್ಲಿ ವಿರೋಧ ವ್ಯಕ್ತವಾಗಿದೆ. ಇಂತಹ ಎಷ್ಟೋ ಸಾವುಗಳು ಪ್ರಪಂಚದಲ್ಲಿ ಆಗುತ್ತಿರುತ್ತದೆ. ಅದೂ ಈತ ಅಶ್ಲೀಲ ಮೆಸೇಜ್ ಕಳುಹಿಸಿದ್ದಕ್ಕೆ ಹತ್ಯೆಯಾಗಿದ್ದಾನೆ. ದರ್ಶನ್ ಆಂಡ್ ಗ್ಯಾಂಗ್ ಮಾಡಿರುವುದು ತಪ್ಪಾಗಿರಬಹುದು. ಆದರೆ ಈತನೂ ಏನೂ ಸಾಚಾ ಆಗಿರಲಿಲ್ಲ. ಹೀಗಿರುವಾಗ ಆತನ ಕುಟುಂಬಕ್ಕೆ ಸರ್ಕಾರಿ ಕೆಲಸ ಕೊಟ್ಟರೆ ಏನು ಸಂದೇಶ ಕೊಟ್ಟಂತಾಗುತ್ತದೆ. ಬೇಕಿದ್ದರೆ ಸ್ವಲ್ಪ ಆರ್ಥಿಕ ಸಹಾಯ ಮಾಡಲಿ ಎಂದು ನೆಟ್ಟಿಗರಲ್ಲಿ ಕೆಲವರು ಅಪಸ್ವರವೆತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ