ಪ್ರತಿದಿನ ಚಪಾತಿ ಸೇವಿಸುವುದು ಉತ್ತಮವೇ?

ಸೋಮವಾರ, 10 ಫೆಬ್ರವರಿ 2020 (06:51 IST)
ಬೆಂಗಳೂರು : ತೂಕ ಹೆಚ್ಚಿರುವವರು ತಮ್ಮ ತೂಕ ಇಳಿಸಿಕೊಳ್ಳಲು ಹಾಗೂ ಮಧುಮೇಹವಿರುವವರು ಪ್ರತಿದಿನ ಚಪಾತಿ ಸೇವಿಸುತ್ತಾರೆ. ಆದರೆ ಇದನ್ನು ಪ್ರತಿದಿನ ತಿಂದರೆ ಉತ್ತಮವೇ ಎಂಬ ಮಾಹಿತಿ ಇಲ್ಲಿದೆ ನೋಡಿ.


ಗೋಧಿಯಲ್ಲಿ ಹಲವಾರು ಪೌಷ್ಟಿಕಾಂಶಗಳಿದ್ದು ಇದು ಆರೋಗ್ಯಕ್ಕೆ ತುಂಬಾ ಉತ್ತಮ. ಇದರಲ್ಲಿ ವಿಟಮಿನ್ ಬಿ, ಇ, ಸತು, ಅಯೋಡಿನ್, ಮ್ಯಾಗ್ನೀಸ್, ಸಿಲಿಕಾನ್ ಪೊಟ್ಯಾಸಿಯಂ ಕ್ಯಾಲ್ಸಿಯಂ ಮುಂತಾದವುಗಳಿವೆ. ಇದು ಆರೋಗ್ಯವಾಗಿರಲು ಸಹಕರಿಸುತ್ತದೆ. ಅಲ್ಲದೇ ಇದು ಚರ್ಮಕ್ಕೂ ಉತ್ತಮ.


ಪ್ರತಿದಿನ ಬೆಳಿಗ್ಗೆ 2 ಚಪಾತಿಯನ್ನು ಹಾಲಿನೊಂದಿಗೆ ಬೆರೆಸಿ ಸೇವಿಸಿದರೆ ರಕ್ತದಲ್ಲಿರುವ ಒತ್ತಡ ಕಡಿಮೆಯಾಗುತ್ತದೆ.ಅಲ್ಲದೇ ಇದು ಗ್ಯಾಸ್ಟ್ರಿಕ್ ಗೆ ಒಳ್ಳೆಯ ಮನೆಮದ್ದು, ಇದನ್ನು ಸೇವಿಸಿದರೆ ಸುಸ್ತು , ಆಯಾಸ ಉಂಟಾಗುವುದಿಲ್ಲ, ಹಾಗೂ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ