ದೇಶದಲ್ಲಿ ಕೇಸರಿ ನಿಷೇಧ ಆಗಿದೆಯೇ: ಆರಗ

ಬುಧವಾರ, 20 ಅಕ್ಟೋಬರ್ 2021 (10:52 IST)
ಬೆಂಗಳೂರು : ದೇಶದಲ್ಲಿ ಕೇಸರಿ ಬಣ್ಣವನ್ನು ನಿಷೇಧ ಮಾಡಲಾಗಿದೆಯೇ? ರಾಷ್ಟ್ರಧ್ವಜದಲ್ಲಿ ಕೇಸರಿ ಬಣ್ಣವಿಲ್ಲವೇ? ನಾಳೆ ಕೇಸರಿಯನ್ನು ತೆಗೆದುಹಾಕಬೇಕು ಎಂದು ಯಾರಾದರೂ ಹೇಳಿದರೆ ಹಾಗೆ ಮಾಡಲಾಗುತ್ತದೆಯೇ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರಶ್ನಿಸುವ ಮೂಲಕ ಪೊಲೀಸರು ಆಯುಧಪೂಜೆ ಸಂದರ್ಭದಲ್ಲಿ ಕೇಸರಿ ಉಡುಪು ಧರಿಸಿದ್ದನ್ನು ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ತವ್ಯದಲ್ಲಿರುವಾಗ ಸಮವಸ್ತ್ರ ತೊಡುತ್ತಾರೆ. ಆದರೆ ಪೂಜೆ ಸಂದರ್ಭದಲ್ಲಿ ಸಮವಸ್ತ್ರದಲ್ಲೇ ಇರಬೇಕೆಂದಿಲ್ಲ. ಠಾಣೆಯಲ್ಲೂ ಎಲ್ಲ ಪೊಲೀಸರು ಸಮವಸ್ತ್ರದಲ್ಲಿ ಇರುವುದಿಲ್ಲ ಎಂದರು.
ಕೇಸರಿ ಶಾಲು ಸಾಂಪ್ರದಾಯಿಕ ಉಡುಗೆಯಾಗಿದೆ. ಪೊಲೀಸರ ಖಾಸಗಿತನವನ್ನೂ ಗೌರವಿಸಬೇಕು. ಪೂಜೆ, ಪುನಸ್ಕಾರ ಹಾಗೂ ಮನೆಗಳಲ್ಲಿ ಇಂಥದ್ದೇ ಬಟ್ಟೆಗಳನ್ನು ತೊಡಬೇಕೆಂದು ಹೇಳಲು ಸಾಧ್ಯವಿಲ್ಲ. ಕೇಸರಿ ಶಾಲು ಹಾಕಿದ ಕೂಡಲೇ ಏನಾಗುತ್ತದೆ? ಕೇಸರಿ ಶಾಲು ಬಿಜೆಪಿಗೆ ಸೀಮಿತವಾಗಿಲ್ಲ ಎಂದು ಹೇಳಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ