ಬಜೆಟ್ ನಲ್ಲಿ ಸತ್ಯ ಎನ್ನುವುದೇ ಇಲ್ಲ ಎಂದವರಾರು?
ಶುಕ್ರವಾರ, 1 ಫೆಬ್ರವರಿ 2019 (17:01 IST)
ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ಮಂಡಿಸಿರುವ ಮಧ್ಯಂತರ ಬಜೆಟ್ ಒಂದು ಸುಳ್ಳಿನ ಕಂತೆ ಎಂದಿರುವ ಬಣ್ಣಿಸಿರುವ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ , ಈ ಬಜೆಟ್ ನಲ್ಲಿ ಎಲ್ಲವೂ ಇದೆ , ಸತ್ಯವೊಂದನ್ನು ಬಿಟ್ಟು ಎಂದು ದೂರಿದ್ದಾರೆ.
ದೇಶದ ಪ್ರತಿ ವಲಯಗಳು ಕುಸಿತ ಕಂಡಿರುವಾಗ ಇಂತಹ ಬಜೆಟ್ ಗಳನ್ನು ಮಂಡಿಸಿ ಏನು ಪ್ರಯೋಜನ? ಎಂದು ಅವರು ತಮ್ಮ ಟ್ವೀಟ್ ನಲ್ಲಿ ಪ್ರಶ್ನಿಸಿದ್ದಾರೆ .
ಕೇಂದ್ರ ಸರ್ಕಾರ ಕೇವಲ ಸುಳ್ಳು ಭರವಸೆಗಳನ್ನು ನೀಡಿದೆ . ಭೂಮಿರಹಿತ ರೈತರು ಹಾಗೂ ಕಾರ್ಮಿಕರಿಗೆ ಯಾವುದೇ ಯೋಜನೆಗಳಿಲ್ಲ . ಸರ್ಕಾರ ತಮ್ಮ ಎಲ್ಲ ಉತ್ತಮ ಕೆಲಸಗಳನ್ನು ಬಿಂಬಿಸಲು ಯತ್ನಿಸಿದೆ . ಆದರೆ , ಜನರು ಬಿಜೆಪಿಯ ಸುಳ್ಳು ಭರವಸೆಗಳಿಂದ ರೋಸಿ ಹೋಗಿದ್ದಾರೆ .
ಐದು ವರ್ಷಗಳ ನೋವು , ದೌರ್ಜನ್ಯಗಳನ್ನು ಕಂಡಿರುವ ರೈತರು , ವರ್ತಕರು , ನಿರುದ್ಯೋಗಿ ಯುವಕರು ಬಿಜೆಪಿಯಿಂದ ಮುಕ್ತಿ ಬಯಸಿದ್ದಾರೆ . ಈಗ ಕೇಂದ್ರದ ಬಜೆಟ್ ನ ಕಣ್ಣೊರೆಸುವ ಘೋಷಣೆಗಳಿಗೆ ಅವರು ಮರುಳಾಗುವುದಿಲ್ಲ ಎಂದರು .
ಆ್ಯಪ್ನಲ್ಲಿ ವೀಕ್ಷಿಸಿ x