'ಯಾರೂ ಏಕಪತ್ನಿ ವ್ರತಸ್ಥರಲ್ಲ' ಎಂದಿದ್ದಕ್ಕೂ ಈ ತಡೆಯಾಜ್ಞೆಗೂ ಸಂಬಂಧವಿದೆಯೇ

Sampriya

ಬುಧವಾರ, 28 ಆಗಸ್ಟ್ 2024 (16:06 IST)
Photo Courtesy X
ಬೆಂಗಳೂರು: ಮಾನಹಾನಿಕಾರ ಸುದ್ದಿ ಪ್ರಸಾರ ಮಾಡದಂತೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರು ಕೋರ್ಟ್ ಮೆಟ್ಟಿಲೇರುತ್ತಿದ್ದ ಹಾಗೇ ದಮ್ಮು ತಾಕತ್ತಿನ ಬಿಜೆಪಿ ನಾಯಕರು ಕ್ಯೂ ನಿಂತು ತಡೆಯಾಜ್ಞೆ ತರುತ್ತಿರುವುದೇಕೆ ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ.

ಬಿಜೆಪಿ ಮಾಜಿ ಸಿಎಂ ಒಬ್ಬರ ಅಶ್ಲೀಲ ವಿಡಿಯೋ ಶೀಘ್ರ ಬಿಡುಗಡೆಯಾಗಲಿದೆ ಎಂದು ಕಾಂಗ್ರೆಸ್ ಶಾಸಕರೊಬ್ಬರು ಹೇಳುತ್ತಿದ್ದ ಬೆನ್ನಲ್ಲೇ ಬಸವರಾಜ ಬೊಮ್ಮಾಯಿ ಅವರು ಕೋರ್ಟ್ ಮೊರೆ ಹೋಗಿರುವುದು ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಸದ್ಯ ಬಸವರಾಜ ಬೊಮ್ಮಾಯಿ ನಡೆಯಿಂದ ಅವರ ವಿರುದ್ಧ ಏನಾದರೂ ಆರೋಪಗಳಿವೆ, ಯಾರಾದರೂ ಅವುಗಳನ್ನು ಬಹಿರಂಗಪಡಿಸಲು ಮುಂದಾಗಿದ್ದಾರಾ, ಹೀಗೆ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ಇದರ ಬೆನ್ನಲ್ಲೇ ಕಾಂಗ್ರೆಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಬಿಜೆಪಿಯವರನ್ನು ಪ್ರಶ್ನೆ ಮಾಡಿದೆ.

ದಮ್ಮು ತಾಕತ್ತಿನ ಬಿಜೆಪಿ ನಾಯಕರು ಕ್ಯೂ ನಿಂತು ತಡೆಯಾಜ್ಞೆ ತರುತ್ತಿರುವುದೇಕೆ?

ಮಾಜಿ ಮುಖ್ಯಮಂತ್ರಿ ಬಿಎಸ್‌ಬೊಮ್ಮಾಯಿ ಅವರೂ ಕೂಡ ತಮಗೆ ಸಂಬಂಧಿಸಿದ ಸುದ್ದಿ ಪ್ರಸಾರ ಮಾಡದಂತೆ ತಡೆಯಾಜ್ಞೆ ತರಲು ಕೋರ್ಟ್ ಮೆಟ್ಟಿಲೇರಿದ ಸುದ್ದಿ ಬಂದಿದೆ,

ಬೊಮ್ಮಾಯಿಯವರಿಗೆ ಕಾಡುತ್ತಿರುವ ಭೀತಿಯಾದರೂ ಯಾವುದು? ಈ ಭೀತಿಗೆ ಕಾರಣವಾಗುವಂತಹ ಯಾವ ಘನಂದಾರಿ ಕೆಲಸ ಮಾಡಿದ್ದಾರೆ?

ಕೆ. ಸುಧಾಕರ್ ಅವರು 'ಯಾರೂ ಏಕಪತ್ನಿ ವ್ರತಸ್ಥರಲ್ಲ' ಎಂದಿದ್ದಕ್ಕೂ ಈ ತಡೆಯಾಜ್ಞೆಗೂ ಸಂಬಂಧವಿದೆಯೇ?

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ