ಫುಟ್‌ಪಾತ್, ಕೊಳಚೆ ನೀರಿನಲ್ಲಿ ಬಿದ್ದಿರುವ ಗಣೇಶನ ಮೂರ್ತಿಗಳು: ಬಿಬಿಎಂಪಿ ಮಾಡಿರುವ ವ್ಯವಸ್ಥೆ ಇದೇನಾ..?

ಶನಿವಾರ, 11 ಸೆಪ್ಟಂಬರ್ 2021 (20:39 IST)
ಬೆಂಗಳೂರು:  ಕೊರೊನಾ ಆತಂಕದ ನಡುವೆಯೂ ಸಿಲಿಕಾನ್ ಸಿಟಿಯಲ್ಲಿ ಗೌರಿ  ಗಣೇಶ ಹಬ್ಬವನ್ನು ಸಂಭ್ರಮ ಸಡಗಡದಿಂದ ಆಚರಿಸಲಾಗಿದೆ. ಅದೇ ರೀತಿ ಬಿಬಿಎಂಪಿ ಕೂಡ ಗಣೇಶನ ವಿಸರ್ಜನೆ ಸಲುವಾಗಿ ಬೆಂಗಳೂರಿಗರಿಗೆ ಸೂಕ್ತ ವ್ಯವಸ್ಥೆ ಮಾಡಿರುವುದಾಗಿ ಹೇಳುತ್ತಿದೆ. ಆದರೆ  ಬಿಬಿಎಂಪಿ ಮಾಡಿರುವ ವ್ಯವಸ್ಥೆ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ನಗರದೆಲ್ಲೆಡೆ  ವಿಸರ್ಜನಾ ಸ್ಥಳ ಮತ್ತು ಸುತ್ತ ಮುತ್ತ  ಹೋಗಿ ನೋಡಿದರೆ   ಗೋಚರಿಸುತ್ತಿದೆ. ನಿನ್ನೆ ಅಲಕಾರಗೊಂಡು ಪೂಜೆ  ಪುನಸ್ಕಾರಗಳನ್ನು ಮಾಡಿಸಿಕೊಂಡಿದ್ದ ಗಣೇಶ ಇಂದು ರಸ್ತೆ ಬದಿಯ ಫುಟ್‌ಪಾತ್‌ನಲ್ಲಿ ಬೀಳುವಂತಾಗಿದೆ. ಬಿಬಿಎಂಪಿಯ ಈ ಅವ್ಯವಸ್ಥೆಗೆ ಜನಸಾಮಾನ್ಯರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 
 
ಗಣೇಶ ವಿಸರ್ಜನೆಗೆ ಟ್ಯಾಂಕರ್ ವ್ಯವಸ್ಥೆ ಮಾಡಿದ್ದೇವೆ, ಕಲ್ಯಾಣಿಗಳ ವ್ಯವಸ್ಥೆ ಆಗಿದೆ ಎಂದು ಬಿಬಿಎಂಪಿ ಹೇಳಿಕೊಳ್ಳುತ್ತಲೇ ಇತ್ತು. ಆದರೆ ಬೆಂಗಳೂರಿನಮುಖ್ಯವಾದ  ಹೆಬ್ಬಾಳದ ಕಲ್ಯಾಣಿಯಲ್ಲಿ ಗಣೇಶ ವಿಸರ್ಜನೆಗೆ ಅವಕಾಶವನ್ನೇ ಕಲ್ಪಿಸಲಾಗಿಲ್ಲ. ಟ್ಯಾಂಕರ್‌ನಲ್ಲಿ ಗಣೇಶ ಬಿಡಲು ವ್ಯವಸ್ಥೆ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದ ಬಿಬಿಎಂಪಿ, ಆ ಟ್ಯಾಂಕರ್‌ನಲ್ಲಿ ಕಲೆಕ್ಟ್  ಮಾಡಿದ್ದ ಗಣೇಶನನ ಮೂರ್ತಿಗಳನ್ನು ರಸ್ತೆ ಬದಿಯಲ್ಲಿರೋ ಕೊಳಚೆಯ ಪಕ್ಕ ಹಾಕಿದ್ದಾರೆ. ಇನ್ನೂ ಕೆಲವು ಗಣೇಶನ ಮೂರ್ತಿಗಳು ಫುಟ್ ಪಾತ್‌ನಲ್ಲಿ ಬಿದ್ದಿದ್ದರೆ, ಅದೆಷ್ಟೋ ಗಣೇಶನ ಮೂರ್ತಿಗಳು ವಿರೂಪಗೊಂಡಿದೆ. 
 
ವಿಘ್ನ ನಿವಾರಕ, ಪ್ರಥಮ ಪೂಜನೀಯ ಗಣಪತಿ ಮೂರ್ತಿಗಳು  ಈ ರೀತಿ ದಿಕ್ಕಾಪಾಲಾಗಿ ಬಿದ್ದಿರೋದನ್ನು ಕಂಡು ಶಾಕ್ ಆಗಿರುವ  ಜನರು ಬಿಬಿಎಂಪಿ ವಿರುದ್ಧ ಆಕ್ರೋಶ ಹೊಅರಹಾಕಿದ್ದಾರೆ. ನಾವೂ ನಿನ್ನೆ ಅಷೆಲ್ಲಾ ಪೂಜೆ ಮಾಡಿ ವಿಸರ್ಜನೆ  ಮಾಡಿದ ಗಣೇಶ ಇದೇನಾ? ನಮ್ಮ ಧಾರ್ಮಿಕ ಭಾವನೆಗೆ ಬೆಲೆನೇ ಇಲ್ವಾ ? ಗಣೇಶ ವಿಸರ್ಜನೆಗೆ ನಾವೂ ಎಲ್ಲಾ  ವ್ಯವಸ್ಥೆ ಮಾಡಿದ್ದೇವೆ ಎಂದು  ಬಿಲ್ಡಪ್ ಕೊಟ್ಟ ಬಿಬಿಎಂಪಿ ಮಾಡಿರುವ  ವ್ಯವಸ್ಥೆ ಇದೇನಾ ? ಟ್ರಾಕ್ಟರ್ ನಲ್ಲಿ ಡ್ರಮ್  ವ್ಯವಸ್ಥೆ ಮಾಡುವ  ಬದಲು ಕಲ್ಯಾಣಿ ಕ್ಲೀನ್ ಮಾಡಿಸಿದರೆ ಆಗುತ್ತಿರಲಿಲ್ಲವಾ ? ಎಂದು ಪ್ರಶ್ನಿಸಿ  ಬಿಬಿಎಂಪಿ ಅವ್ಯವಸ್ಥೆ, ಬೇಜಾವಬ್ದಾರಿತನದ ವಿರುದ್ಧ ರಾಜಧಾನಿಯ  ಜನರು ಕಿಡಿಕಾರಿದ್ದಾರೆ.
ganesha

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ