ಹೆಚ್.ಡಿ ದೇವೇಗೌಡ ಹಾಗೂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದ ಈಶ್ವರಪ್ಪ
ಭಾನುವಾರ, 11 ನವೆಂಬರ್ 2018 (13:42 IST)
ಕಲಬುರಗಿ :ಶಿವಮೊಗ್ಗ ನಗರದ ಹಾಲಿ ಶಾಸಕ ಕೆ.ಎಸ್ ಈಶ್ವರಪ್ಪ ಅವರು ಪರೋಕ್ಷವಾಗಿ ಹೆಚ್.ಡಿ ದೇವೇಗೌಡ ಹಾಗೂ ಸಿದ್ದರಾಮಯ್ಯ ಅವರ ವಿರುದ್ದ ಹರಿಹಾಯ್ದಿದ್ದಾರೆ.
ಇಂದು ಕಲಬುರಗಿಯಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಒಬ್ಬರು ಮಣ್ಣಿನ ಮಕ್ಕಳು ಅಂತ ಕರೆದುಕೊಳ್ಳುತ್ತಾರೆ. ಇನ್ನೊಬ್ಬರು ತಮ್ಮನು ತಾವು ಅಹಿಂದ ನಾಯಕ ಅಂತ ಕರೆದುಕೊಳ್ಳುತ್ತಾರೆ ಹಾಗಾದ್ರೇ ನಾವೇನು ಕಲ್ಲಿನ ಮಕ್ಕಳ? ಕಿಡಿಕಾರಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ನಡೆದ ಪಂಚ ಕ್ಷೇತ್ರಗಳ ಚುನಾವಾಣೆಗೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ’ಉಪಚುನಾವಣೆಯಲ್ಲಿ ಗೆಲುವು ಕಂಡಿರುವವರು ಪ್ರಧಾನಿ ಹುದ್ದೆಗೆ ಏರಿರುವ ಹಾಗೇ ಕುಣಿದಾಡುತ್ತಿದ್ದಾರೆ. ಆದರೆ ಅವರು ಹೆಚ್ಚುವರಿಯಾಗಿ ಗೆದ್ದಿರುವುದು ಕೇವಲ ಬಳ್ಳಾರಿ ಮಾತ್ರ ಎಂದು ಟಾಂಗ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.