ಧೂಮಪಾನ ಮಾಡಬೇಡಿ ಎಂದಿದ್ದಕ್ಕೆ ಗರ್ಭಿಣಿ ಮಹಿಳೆಯನ್ನು ಕೊಲೆ ಮಾಡಿದರು!
ಚಿನತ್ ದೇವಿ (45) ಎಂಬಾಕೆ ಕೊಲೆಯಾದ ದುರ್ದೈವಿ. ಈಕೆ ತನ್ನ ಕುಟುಂಬದವರೊಂದಿಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಧೂಮಪಾನ ಮಾಡುತ್ತಿದ್ದ ಸೋನು ಯಾದವ್ ಎಂಬಾತನಿಗೆ ಧೂಮಪಾನ ಮಾಡದಂತೆ ಕೇಳಿಕೊಂಡಿದ್ದಳು.
ಈ ಸಂದರ್ಭದಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಸೋನು ಯಾದವ್ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತಕ್ಷಣ ಶಹಜಾನ್ ಪುರ ಎಂಬಲ್ಲಿ ರೈಲು ನಿಲ್ಲಿಸಿ ಸಮೀಪದ ಆಸ್ಪತ್ರೆಗೆ ಆಕೆಯನ್ನು ಕರೆದೊಯ್ಯಲಾಯಿತಾದರೂ ಜೀವವುಳಿಸಲಾಗಲಿಲ್ಲ. ಆರೋಪಿಯನ್ನು ಸೆರೆ ಹಿಡಿಯಲಾಗಿದೆ.