ನೀರು ಬಿಡುವಂತೆ ಆದೇಶ ಹೊರಡಿಸಿ
ಸುಪ್ರೀಂ ಕೋರ್ಟ್ನಲ್ಲಿ ತಮಿಳುನಾಡು ಪರ ವಕೀಲ ಮುಕುಲ್ ರೋಹ್ಟಗಿ ಮಂಡಿಸಿದ ವಾದವೇನು ಎಂಬುದನ್ನು ನೋಡುವುದಾದರೆ, ಪ್ರಸ್ತುತ ಸಮಯದಲ್ಲಿ 6,400 ಕ್ಯೂಸೆಕ್ ನೀರು ಬಿಡಬಹುದು.. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ 5,000 ಕ್ಯೂಸೆಕ್ ನೀರು ಹರಿಸಲು ಸೂಚಿಸಿದೆ.. ಈ ಆದೇಶವನ್ನ ಕರ್ನಾಟಕ ಪಾಲನೆ ಮಾಡುತ್ತಿಲ್ಲ ಎಂದು ತಿಳಿಸಿದ್ರು.. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ಪ್ರಕಾರ ನೀರು ಪಡೆಯುತ್ತಿಲ್ಲ.. ನಾವು ಬಹಳ ಕಡಿಮೆ ನೀರನ್ನು ಪಡೆಯುತ್ತಿದ್ದೇವೆ. ನೀರಿನ ಸಂಕಷ್ಟ ಇದೆ ಅನ್ನೋದು ನಮಗೂ ಗೊತ್ತು.. ಆದ್ರೆ ಸಂಕಷ್ಟ ಸೂತ್ರವನ್ನ ಕರ್ನಾಟಕ ಪಾಲನೆ ಮಾಡ್ತಿಲ್ಲ.. ಕರ್ನಾಟಕ ಕೇವಲ 2,500 ಕ್ಯೂಸೆಕ್ ನೀರು ಹರಿಸುತ್ತಿದೆ.. ಕರ್ನಾಟಕಕ್ಕೆ ನೀರು ಬಿಡುವಂತೆ ಸೂಚನೆ ಕೊಡಬೇಕು ಎಂದು ಮನವಿ ಮಾಡಿದ್ರು.. 6,400 ಕ್ಯೂಸೆಕ್ ನೀರು ಬಿಡುಗಡೆಗೆ ಸೂಚನೆ ಕೊಡಬೇಕು.. ನೀರು ಹರಿಸಬೇಕು ಅನ್ನೋ ಬೇಡಿಕೆ ನಮ್ಮದು.. ಕರ್ನಾಟಕ ನಿಗದಿತ ಪ್ರಮಾಣದಲ್ಲಿ ನೀರನ್ನು ಹರಿಸಿಲ್ಲ ಎಂದು ಆರೋಪಿಸಿದ್ರು.