ನೀರಿನ ಅಭಾವ...ನೀರು ಬಿಡಲು ಸಾಧ್ಯವಿಲ್ಲ

ಗುರುವಾರ, 21 ಸೆಪ್ಟಂಬರ್ 2023 (16:24 IST)
ಇನ್ನು ಸುಪ್ರೀಂಕೋರ್ಟ್​ನಲ್ಲಿ ಕರ್ನಾಟಕ ಪರ ವಾದ ಮಂಡಿಸಿದ ಶ್ಯಾಮ್​ ದಿವಾನ್​ ಅವರ ವಾದ ಏನು ಎಂಬುದನ್ನು ನೋಡುವಾದರೆ, ಸಂಕಷ್ಟದಲ್ಲೂ ತಮಿಳುನಾಡಿಗೆ ನೀರು ಬಿಡಲಾಗಿದೆ.. ಮಳೆ ಕೊರತೆಯಿಂದ ಕುಡಿಯುವ ನೀರಿನ ಸಮಸ್ಯೆ ಇದೆ.. ಕಾವೇರಿ ಪ್ರಾಧಿಕಾರ ಹೇಳಿದಂತೆ ನೀರು ಹರಿಸಲಾಗಿದೆ.. CWMA ಕೊಟ್ಟಿರುವ ಆದೇಶವನ್ನ ಪಾಲಿಸಿದ್ದೇವೆ ಎಂದು ತಿಳಿಸಿದ್ರು.. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶವನ್ನ ಈವರೆಗೂ ಪಾಲಿಸಿದ್ದೇವೆ.. ಕರ್ನಾಟಕದಲ್ಲಿ 56% ಮಳೆಯ ಕೊರತೆ ಉಂಟಾಗಿದೆ.. CWRC 6,500 ಕ್ಯೂಸೆಕ್‌ ನೀರು ಹರಿಸಲು ಸೂಚಿಸಿದೆ.. CWMA 5000 ಕ್ಯೂಸೆಕ್‌ ನೀರು ಬಿಡಲು ಆದೇಶಿಸಿದೆ.. ಕೇಂದ್ರದ ಮಧ್ಯಸ್ಥಿಕೆಗೆ ಕೇಳಿದ್ದೇವೆ ಎಂದು ಕರ್ನಾಟಕ ಮನವರಿಕೆ ಮಾಡ್ತು.. ನೀರಿನ ಅಭಾವ ಇರೋದ್ರಿಂದ ನೀರು ಬಿಡಲು ಕಷ್ಟ ಎಂದು ಕರ್ನಾಟಕ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ