ಬೆಂಗಳೂರಿನಲ್ಲಿ ಹಲವೆಡೆ ಐಟಿ ದಾಳಿ
ನಗರದಲ್ಲಿ ಏಕಕಾಲಕ್ಕೆ ನಗರದ 15ಕ್ಕು ಹೆಚ್ಚು ಸ್ಥಳಗಳಲ್ಲಿ ಐಟಿ ದಾಳಿ ನಡೆಸಲಾಗಿದೆ.ವಿಜಯನಗರ ಬಿಟಿಎಂ, ಹುಳಿಮಾವು, ಸದಾಶಿವನಗರ, ಸ್ಯಾಂಕಿ ಟ್ಯಾಂಕ್ ಸೇರಿದಂತೆ ಹಲವೆಡೆ ದಾಳಿ ನಡೆಸಲಾಗಿದೆ.ಐಟಿ ಅಧಿಕಾರಿಗಳ 15 ಕ್ಕು ಹೆಚ್ಚು ತಂಡಗಳಿಂದ ದಾಳಿ ನಡೆಸಿದ್ದು, ಚೆನ್ನೈ, ದೆಹಲಿಯಿಂದ ರಾತ್ರೋರಾತ್ರಿ ಬೆಂಗಳೂರಿಗೆ ಐಟಿ ಅಧಿಕಾರಿಗಳು ಬಂದಿದ್ದು,ತೆರಿಗೆ ವಂಚನೆ ಮಾಡಿರೋ ಖಾಸಗಿ ಕಂಪನಿಗಳು, ಅದರ ಮಾಲೀಕರು ಹಾಗೂ ಚಿನ್ನದ ವ್ಯಾಪಾರಿಗಳಮನೆ ಮೇಲೆ ದಾಳಿ ನಡೆಸಿರುವ ಬಗ್ಗೆ ಮಾಹಿತಿ ಇದ್ದು,ಸದ್ಯ ಮನೆ ಹಾಗೂ ಕಚೇರಿಗಳ ಮೇಲೆ ದಾಳಿಮಾಡಿ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.