ಪ್ರತಿಪಕ್ಷದಿಂದ ಸಭಾತ್ಯಾಗ ಮಾಡಿರುವುದು ನಾಚಿಕೆಗೇಡು -ಸಿಎಂ

geetha

ಮಂಗಳವಾರ, 20 ಫೆಬ್ರವರಿ 2024 (16:05 IST)
ಬೆಂಗಳೂರು : ಮಂಗಳವಾರ ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ ಕುಪಿತರಾದ ಬಿಜೆಪಿ ನಾಯಕರು ಸಾಮೂಹಿಕವಾಗಿ ಸಭಾತ್ಯಾಗ ಮಾಡಿದರು. ಇದನ್ನು ಲೇವಡಿ ಮಾಡಿದ ಸಿಎಂ ಸಿದ್ದರಾಮಯ್ಯ ನಾಚಿಕೆಯಿಂದ ಬಿಜೆಪಿವರು ಹೊರಗೆ ಹೋಗುತ್ತಿದ್ದಾರೆ ಎಂದು ಟೀಕಿಸಿದರು. ಕೇಂದ್ರ ಬೆಜಟ್‌ ನಲ್ಲಿ ಕರ್ನಾಟಕ ರಾಜ್ಯಕ್ಕೆ ಯಾವುದೇ ಹೆಚ್ಚಿನ ನೆರವು ನೀಡಿಲ್ಲ. ಜೊತೆಗೆ ತೆರಿಗೆ ಹಂಚಿಕೆಯಲ್ಲಿಯೂ ಸಹ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಮ್ಮ ಭಾಷಣದ ವೇಳೆ ನುಡಿದರು. ಇದು ಬಿಜೆಪಿಯವರನ್ನು ಕೆರಳಿಸಿತು. 

ಬಸವರಾಜ ಬೊಮ್ಮಾಯಿ ಹಾಗೂ ಬಸನಗೌಡ ಪಾಟೀಲ್‌ ಯತ್ನಾಳ್‌ ಎದ್ದು ನಿಂತು ಕೇಂದ್ರ ಸರ್ಕಾರ ರಾಜ್ಯದ ನೀರಾವರಿ ಯೋಜನೆಗಳು ಹಾಗೂ ಲೋಕಪಯೋಗಿ ಯೋಜನೆಗಳಿಗೆ ಸಾಕಷ್ಟು ನೆರವು ನೀಡಿದೆ ಎಂದು ವಾದಿಸಿದರು. ಪ್ರತ್ಯುತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ದಲಿತರ ಪರವಾಗಲೀ, ಅಲ್ಪಸಂಖ್ಯಾತರ ಪರವಾಗಲೀ ನಿಮಗೆ ಕಾಳಜಿಯಿಲ್ಲ. ಕೇವಲ ಸದನದಲ್ಲಿ ಎದ್ದು ನಿಂತು ಆರ್ಭಟಿಸುವುದಕ್ಕಷ್ಟೇ ನಿಮ್ಮ ರಾಜಕೀಯ ಸೀಮಿತ ಎಂದು ಟೀಕಿಸಿದರು. ಈ ವೇಳೆ ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರು ಸಭಾತ್ಯಾಗ ಮಾಡಿದರು. ಇದನ್ನು ನೋಡಿ ನಾಚಿಕೆಯಾಗಬೇಕು ನಿಮಗೆ. ನಾಚಿಕೆ ತಡೆಯಲಾರದೇ ನೀವು ಹೊರಹೋಗುತ್ತಿದ್ದೀರಿ ಎಂದು ಛೇಡಿಸಿದರು. 
 
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ