ಯಾರ ಕಣ್ಣಿಗೆ ಕಾಣದ ಇದು ಅಗೋಚರ ಕಾಂಚಾಣ

geetha

ಗುರುವಾರ, 7 ಮಾರ್ಚ್ 2024 (17:00 IST)
Photo Courtesy: Twitter
ಬೆಂಗಳೂರು-ಇದು ಡಿಜಿಟಲ್ ಯುಗ. ಈ ತಂತ್ರಜ್ಞಾನದ ಯುಗದಲ್ಲಿ ಹೊಸ ಹೊಸ ಆವಿಷ್ಕಾರಗಳು ನಡೀತಾನೆ ಇರ್ತಾವೆ. ಈ ಬಿಟ್ ಕಾಯಿನ್ ಈ ಡಿಜಿಟಲ್ ಯುಗದ ಹೊಸ ರೀತಿಯ ಕರೆನ್ಸಿ. ಜಗತ್ತಿಗೆ ಅನುಕೂಲವಾಗಲೆಂದು ಯಾರೋ ಕಂಡು ಹಿಡಿದ ಕರೆನ್ಸಿ. ಆದ್ರೆ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು....ಅದಕ್ಕೆ ಕಾರಣವೂ ಇತ್ತು ಬಿಡಿ...
 
ಡಿಜಿಟಲ್ ಕರೆನ್ಸಿ. ಇದೊಂಥರಾ ಕಾಲ್ಪನಿಕ ನಾಣ್ಯಗಳು. ಈ ಡಿಜಿಟಲ್ ಕರೆನ್ಸಿಗೆ ಆಕಾರವಿಲ್ಲ, ಬಣ್ಣವಿಲ್ಲ, ರೂಪವೂ ಇಲ್ಲ. ಹಾಗಂತ ಇದಕ್ಕೆ ಮೌಲ್ಯ ಇಲ್ಲ ಅಂತ ಅಲ್ಲ. ಇದರ ಮೌಲ್ಯ ಲಕ್ಷಾಂತರ ರೂಪಾಯಿಗಳು. ಆದ್ರೆ ಇದು ಕಣ್ಣಿಗೆ ಕಾಣಿಸೋದಿಲ್ಲ. ಹೀಗಾಗಿ ಇದರ ಕಾಲ್ಪನಿಕ ಚಿತ್ರಣಗಳನ್ನಷ್ಟೇ ಎಲ್ಲರ ಕಣ್ಣಿಗೆ ಕಾಣಿಸುತ್ತೆ.
 
ಯಾರ ಕಣ್ಣಿಗೆ ಕಾಣದ ಇದು ಅಗೋಚರ ಕಾಂಚಾಣ
ಆದರೂ ನಿಮ್ಮ ಅಕೌಂಟ್‌ನಲ್ಲಿರುತ್ತೆ ಲಕ್ಷಾಂತರ ಹಣ
 
ಇದು ಅಗೋಚರ ಸಂಪತ್ತಿನ ಲೋಕ. ಇದು ಯಾರ ಕಣ್ಣಿಗೆ ಬೀಳೋದಿಲ್ಲ. ಇದನ್ನು ಜೇಬಿನಲ್ಲಿ ತುಂಬಿಕೊAಡು ಹೋಗಬೇಕಾಗಿಲ್ಲ. ನಿಮ್ಮ ಅಕೌಂಟ್‌ನಲ್ಲಿ ಹಣ ಇದ್ದರೂ ಅಲ್ಲಿ ಕರೆನ್ಸಿ ಇರಲ್ಲ. ಬದಲಾಗಿ ಅದರ ಮೌಲ್ಯ ಅಕೌಂಟ್‌ನಲ್ಲಿ ತುಂಬಿರುತ್ತೆ. ಆ ಮೌಲ್ಯ ನಿಮಗೆ ಕಾಣಿಸುತ್ತದೆ ಅಷ್ಟೇ..ಈ ಮಾಯಾವಿ ಕರೆನ್ಸಿಯ ಮಾಯಾಜಾಲವೇ ವಿಚಿತ್ರ. ಇದು ಈಗ ಜಗತ್ತಿನಲ್ಲೆಲ್ಲ ವ್ಯಾಪಿಸಿದೆ. ಎಲ್ಲವೂ ಕಂಪ್ಯೂಟರ್‌ನಲ್ಲಿ, ಯಾವುದೋ ಆಪ್‌ನಲ್ಲಿ, ಯಾವುದೋ ಸಾಫ್ಟ್ವೇರ್ ನಲ್ಲಿ ನಿಮ್ಮ ಡಿಜಿಟಲ್ ಕರೆನ್ಸಿ ಅಕೌಂಟ್ ದಾಖಲಾಗಿರುತ್ತದೆ. ಅದರ ವಿವರ ನಿಮಗೊಂದೇ ಗೊತ್ತಿರುತ್ತೆ. ಅದರ ಕೋಡ್ ನಿಮಗೊಂದೇ ತಿಳಿದಿರುತ್ತೆ. ಅದರ ವ್ಯವಹಾರ ಎಲ್ಲವೂ ನಿಮ್ಮ ಕೈಯಲ್ಲಿ ಮಾತ್ರ. 
 
ಯಾರ ನಿಯಂತ್ರಣದಲ್ಲೂ ಇಲ್ಲದ ಈ ಬಿಟ್ ಕಾಯಿನ್
ವಿಚಿತ್ರ ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ಸಂಪತ್ತು ಸಂಗ್ರಹ
 
ಇದು ಯಾರ ನಿಯಂತ್ರಣದಲ್ಲೂ ಇಲ್ಲ. ಈ ಡಿಜಿಟಲ್ ಕರೆನ್ಸಿ ಹಲವು ರೂಪದಲ್ಲಿದ್ದಾವೆ. ಆದ್ರೆ ಬೆಂಗಳೂರಿನಿAದ ಹಿಡಿದು ಮಾರಿಷಸ್ ವರೆಗೆ ಸದ್ದು ಮಾಡಿತ್ತು ಈ ಬಿಟ್ ಕಾಯಿನ್. ಇದು ಕೂಡ ಒಂದು ರೀತಿಯ ಡಿಜಿಟಲ್ ಕರೆನ್ಸಿ. ಈ ಬಿಟ್ ಕಾಯಿನ್ ವ್ಯವಹಾರವನ್ನೂ ಯಾರೂ ನಿಯಂತ್ರಿಸುವುದಿಲ್ಲ. ಆದ್ರೆ ವಿಚಿತ್ರ ಅಂದ್ರೆ ಸ್ವಯಂ ಚಾಲಿತ ,ಕೆಲವೊಮ್ಮೆ ಅದ್ಯಾವುದೋ ದೇಶದಲ್ಲಿ ಕಂಪ್ಯೂಟರ್ ಮುಂದೆ ಕುಳಿತಿರುವ ಅಪರಿಚಿತರು ಇದನ್ನು ನಿಯಂತ್ರಿಸುತ್ತಾರೆ. ಇದೊಂದು ವಿಚಿತ್ರ ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ಸಂಗ್ರಹವಾಗುವ ಸಂಪತ್ತು.
 
ಕಪ್ಪು ಕುಳಗಳನ್ನು ಆಕರ್ಷಿಸುತ್ತಿದೆ ಬಿಟ್ ಕಾಯಿನ್
ಯಾರಿಗೂ ಗೊತ್ತಾಗದಂತೆ ಹೂಡಿಕೆ ಮಾಡಲು ಸುಲಭ
 
ಕಪ್ಪು ಹಣವನ್ನು ಗೋಣಿಚೀಲದಲ್ಲಿ ಇಟ್ಟುಕೊಂಡವರಿಗೆ ,ಬೇನಾಮಿ ಹೆಸರಿನಲ್ಲಿ ಇಟ್ಟುಕೊಂಡವರಿಗೆ ಈ ಬಿಟ್ ಕಾಯಿನ್ ಮಾಯಾವಿ ತನ್ನತ್ತ ಆಕರ್ಷಿಸತೊಡಗಿದೆ. ಕಾರಣ ಈ ಕಪ್ಪುಕುಳಗಳು ಅಥವಾ ಕೋಟಿ ಕೋಟಿ ಸಂಪತ್ತು ಗಳಿಸಿರೋರಿಗೆ ಇದೊಂದು ಹಣ ಇಟ್ಟುಕೊಳ್ಳುವ ದಾರಿಯಾಗಿ ಕಂಡಿದೆ. ನಿಮ್ಮ ಹಣವನ್ನು ಯಾವುದೋ ದಲ್ಲಾಳಿಗೋ, ಅಥವಾ ಸ್ವಯಂ ನೀವೇ ಆನ್ ಲೈನ್ ನಲ್ಲಿ ಹೂಡಿಕೆ ಮಾಡಿ ಬಿಟ್ ಕಾಯಿನ್ ಪರ್ಚೇಸ್ ಮಾಡಿ ಬಿಟ್ಟರೆ ಅದು ಯಾರಿಗೂ ಗೊತ್ತಾಗಲ್ಲ. ಅದು ನಿಮ್ಮ ಕೈಯಲ್ಲೂ ಇರಲ್ಲ. ಈ ಬಿಟ್ ಕಾಯಿನ್  ಅಕೌಂಟ್‌ಗೆ ಬೇರಾವ ಲಿಂಕ್ ಕೂಡ ಇರಲ್ಲ. ಹೀಗಾಗಿ ಕಪ್ಪು ಕುಳಗಳನ್ನು ಬಲೆಗೆ ಬೀಳಿಸುವ ಸಂಸ್ಥೆಗಳ ಕಣ್ಣು ತಪ್ಪಿಸಬಹುದು ಎಂಬ ಆಲೋಚನೆ. ಇದಕ್ಕಾಗಿಯೇ ಕರ್ನಾಟಕದಿಂದಲೂ ನೂರಾರು ಕೋಟಿ ಹೂಡಿಕೆ ಮಾಡಿ ಅನೇಕ ಪ್ರಭಾವಿಗಳು, ಅವರ ಪುತ್ರರು ಬಿಟ್ ಕಾಯಿನ್ ಪರ್ಚೇಸ್ ಮಾಡಿಟ್ಟುಕೊಂಡಿದ್ದಾರೆ ಎಂಬ ಮಾಹಿತಿಯೇ ಈ ಹಿಂದೆ ಸದ್ದು ಮಾಡಿತ್ತು.
 
ಯಾರ ಹೆಸರಿನಲ್ಲಿದ್ಯೋ, ಯಾರಿಂದ ಪರ್ಚೇಸ್ ಎಲ್ಲವೂ ರಹಸ್ಯ
 
ಈ ಬಿಟ್ ಕಾಯಿನ್ ಮೌಲ್ಯ ಸಿಕ್ಕಾಪಟ್ಟೆ ಏರ್ತಾನೇ ಇದೆ. ಇದರ ಮೌಲ್ಯ ಲಕ್ಷಾಂತರ ರೂಪಾಯಿಗಳು. ಷೇರು ಮಾರುಕಟ್ಟೆಯಲ್ಲಿ ಸಾಮಾನ್ಯ ಕರೆನ್ಸಿ ಹೇಗೆ ಏರಿಳಿತ ಕಾಣುತ್ತೋ ಹಾಗೆಯೇ ಇದು ಕೂಡ ಮೌಲ್ಯಗಳಲ್ಲಿ ಏರಿಳಿತ ಕಾಣುತ್ತೆ. ಆರಂಭದಲ್ಲಿ ಸಾವಿರದಷ್ಟು ಇದ್ದ ಈ ಬಿಟ್ ಕಾಯಿನ್ ಮೌಲ್ಯ ಇದೀಗ ಲಕ್ಷಾಂತರ ರೂಪಾಯಿಗಳಿಗೆ ಏರಿ ಬಿಟ್ಟಿದೆ. ಇದರ ಮೌಲ್ಯ ಹಿಂದೆ ಕುಸಿದು ಬಿಟ್ಟಿತ್ತು. ಆಗ ಕೋಟ್ಯಾಂತರ ರೂಪಾಯಿಗಳನ್ನು ಲಾಸ್ ಮಾಡಿಕೊಂಡವರು ಬಹಳ ಮಂದಿ ಅನ್ನೋ ಮಾಹಿತಿ ಇದೆ. ವಿಚಿತ್ರ ಅಂದ್ರೆ ಹಣವಂತರೂ, ಅದರಲ್ಲೂ ಅಕ್ರಮ ಸಂಪತ್ತು ಕೂಡಿಟ್ಟುಕೊಂಡಿರೋರು ಅಲ್ಲೆಲ್ಲೋ ಯಾರದ್ದೋ ಮೂಲಕ ತಮ್ಮ ಹಣವನ್ನು ವಿದೇಶಕ್ಕೆ ಸಾಗಿಸಿ ಬಿಡ್ತಾರೆ. ಅಥವಾ ಯಾರೋ ದಲ್ಲಾಳಿಗಳ ಮೂಲಕ ಈ ಬಿಟ್ ಕಾಯಿನ್ ಮೇಲೆ ಇನ್ ವೆಸ್ಟ್ ಮಾಡಿಸ್ತಾರೆ. ಅದರ ನಂಬರ್ ಮತ್ತು ಕೋಡ್ ನಿಮ್ಮ ಹತ್ತಿರ ಇದ್ದೇ ಇರುತ್ತೆ. ಇದನ್ನು ಅಂಗೈನಲ್ಲಿರುವ ನಿಮ್ಮ ಫೋನ್ ನಲ್ಲೇ ನೋಡಿಕೊಳ್ಳಬಹುದು. ನಿಮ್ಮ ಇನ್ ವೆಸ್ಟ್ ಮೆಂಟ್ ಲಾಸ್ ಆಗ್ತಿದೆ ಅಂತ ಅನಿಸಿದರೆ ಅದನ್ನು ಹಿಂದಕ್ಕೆ ಪಡೆಯಬಹುದು. ಬಿಟ್ ಕಾಯಿನ್ ಗಳನ್ನು ಮಾರಾಟ ಮಾಡಬಹುದು.
 
ಈಗಿನ ಕಾಲದಲ್ಲಿ ಕುಬೇರರಿಗೆ ಹಣ ಇಡೋದು ಎಲ್ಲಿ ಅಂತಾನೇ ಗೊತ್ತಾಗ್ತಾ ಇರಲಿಲ್ಲ. ನೋಟುಗಳನ್ನು ಗೋಣಿ ಚೀಲದಲ್ಲಿ ತುಂಬಿಟ್ರೆ ಅದನ್ನ ಕಾಯೋದೇ ಕಷ್ಟ. ಅಷ್ಟೊಂದು ನೋಟುಗಳನ್ನು ಎಣಿಸಿ ಎಣಿಸಿ ತುಂಬಿಟ್ಟರೂ ಯಾರೋ ಬಂದು ಕನ್ನ ಹಾಕಿ ಬಿಟ್ಟರೆ ಅನ್ನೋ ಭಯ. ಇನ್ನು ಬ್ಯಾಂಕ್ ಗಳಲ್ಲಿಟ್ಟರೆ ಅದು ಇಡೀ ಜಗತ್ತಿಗೆಲ್ಲ ಗೊತ್ತಾಗಿ ಹೋಗುತ್ತದೆ. ತೆರಿಗೆ ಕಟ್ಟಬೇಕು, ಹಣ ಎಲ್ಲಿಂದ ಬಂತು ಅಂತ ಲೆಕ್ಕ ಕೊಡಬೇಕು. ಸಂಪತ್ತನ್ನು ಸಕ್ರಮಗೊಳಿಸೋದು ಒಂದು ದೊಡ್ಡ ತಲೆ ನೋವು. ಯಾವಾಗ ಐಟಿಯವರು ,ಇಡಿಯವರು ರೇಡ್ ಮಾಡ್ತಾರೋ ಅನ್ನೋ ಭಯ. ಆದ್ರೆ ಈ ಬಿಟ್ ಕಾಯಿನ್ ಒಮ್ಮೆ ಪರ್ಚೇಸ್ ಮಾಡಿ ಬಿಟ್ಟರೆ ಕೊನೆಗೆ ಎಲ್ಲವೂ ಅಗೋಚರ. ಬಿಟ್ ಕಾಯಿನ್ ಪರ್ಚೆಸ್ ಮಾಡಿ ಕೊನೆಗೂ ಅದರ ಮೂಲಕವೇ ವ್ಯವಹಾರ ಮಾಡ್ತಾ ಇದ್ರೆ ಹೊರ ಜಗತ್ತಿಗೇ ಏನೂ ಗೊತ್ತಾಗಲ್ಲ. ಅದ್ಯಾವುದೋ ಆಪ್, ಅದ್ಯಾವುದೋ ಕೋಡ್ , ಅದ್ಯಾವುದೋ ಪಾಸ್ ವರ್ಡ್ ಇಟ್ಟುಕೊಂಡರೆ ಎಲ್ಲವೂ ಸುಲಲಿತ. ಹೀಗಾಗಿಯೇ ಕುಬೇರರನ್ನು ,ಅಕ್ರಮ ಸಂಪತ್ತು ಕೂಡಿಟ್ಟುಕೊಂಡಿರೋರನ್ನು ಈ ಬಿಟ್ ಕಾಯಿನ್ ತನ್ನತ್ತ ಸೆಳೆಯುತ್ತಿದೆ. ಅದಕ್ಕೆ ಹೇಳಿದ್ದು ಇದು ಮಾಯಾವಿಯ ಮಾಯಾಜಾಲ ಅಂತಾ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ