ರಂಜಾನ್ ವೇಳೆ ದರ್ಗಾ, ಮಸೀದಿಗಳಲ್ಲಿ ಈ ಕೆಲಸ ಮಾಡಿದ್ರೆ ಬೀಳುತ್ತೆ ಕೇಸ್

ಭಾನುವಾರ, 19 ಏಪ್ರಿಲ್ 2020 (15:09 IST)
ಪವಿತ್ರ ರಮಜಾನ್  ಸಂಬಂಧ ಮಸೀದಿ ಹಾಗೂ ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ನಿರ್ಬಂಧಿಸಿ  ಆದೇಶ ಹೊರಡಿಸಲಾಗಿದೆ.

ಕೋವಿಡ್-19 ಕೊರೊನಾ ಸೋಂಕು ಹರಡಿರುವ ಹಿನ್ನಲೆಯಲ್ಲಿ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಏಪ್ರಿಲ್ ನಲ್ಲಿ  ಪ್ರಾರಂಭವಾಗಲಿರುವ ಪವಿತ್ರ ರಮಜಾನ್  ಸಂಬಂಧ ಮಸೀದಿ ಹಾಗೂ ದರ್ಗಾಗಳಲ್ಲಿ ಸಾಮೂಹಿಕ ಪ್ರಾರ್ಥನೆಗಳನ್ನು ನಿರ್ಬಂಧಿಸಿ  ಆದೇಶ ಹೊರಡಿಸಿದೆ.

ರಮಜಾನ್ ತಿ೦ಗಳಿನಲ್ಲಿ ಸಾರ್ವಜನಿಕರು ಪ್ರತಿದಿನದ 5 ಬಾರಿಯ ಪ್ರಾರ್ಥನೆಗಳನ್ನು ಮತ್ತು ಜುಮ್ಮಾ (ಶುಕ್ರವಾರ) ಹಾಗೂ ತರಾವೀಹ್ ನಮಾಜ್‍ಗಳನ್ನು ಸಾಮೂಹಿಕವಾಗಿ ಮಸೀದಿಗಳಲ್ಲಿ ಪ್ರಾರ್ಥಿಸುವುದನ್ನು ನಿಷೇಧಿಸಲಾಗಿದೆ.

ಕೋವಿಡ್-19 ಕೊರೊನಾ ಸೋಂಕು ಹರಡಿರುವ ಹಿನ್ನಲೆಯಲ್ಲಿ ಏಪ್ರಿಲ್ 15 ರಿಂದ ಮೇ 3ರವರೆಗೆ ದೇಶಾದ್ಯಂತ ಲಾಕ್‍ಡೌನ್ ಘೋಷಣೆಯಾಗಿದೆ. ಈ ಪ್ರಯುಕ್ತ ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಹೊರಡಿಸಿರುವ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಆದೇಶವನ್ನು ಉಲ್ಲಂಘಿಸಿದಲ್ಲಿ ಕಾನೂನು ಕ್ರಮ ಜರುಗಿಸಲಾಗುವದು ಎಂದು ಗದಗ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು ತಿಳಿಸಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ