ಯುವತಿಗೆ ಪೀಡಿಸುತ್ತಿದ್ದ ದೈಹಿಕ ಶಿಕ್ಷಕನಿಗೆ ಹಿಗ್ಗಾಮುಗ್ಗಾ ಥಳಿಸಿದ ಆಕೆಯ ಸ್ನೇಹಿತರು

ಮಂಗಳವಾರ, 31 ಡಿಸೆಂಬರ್ 2019 (10:57 IST)
ಬೆಂಗಳೂರು : ಯುವತಿಗೆ ಪೀಡಿಸುತ್ತಿದ್ದ ದೈಹಿಕ ಶಿಕ್ಷಕನಿಗೆ ಆಕೆಯ ಸ್ನೇಹಿತರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಬೆಂಗಳೂರಿನ ಎಂಜಿ ರೋಡಲ್ಲಿ ನಡೆದಿದೆ.



ಜಾನ್ ಯುವತಿಗೆ ಪೀಡಿಸುತ್ತಿದ್ದ ಆರೋಪಿಯಾಗಿದ್ದು, ಈತ ಮಾರತಹಳ್ಳಿ ನ್ಯೂ ಹಾರಿಜಾಂಟಲ್ ಕಾಲೇಜಿನ ದೈಹಿಕ ಶಿಕ್ಷಕನಾಗಿ ಕಾರ್ಯನಿರ್ವಹಿಸುತ್ತಿದ್ದ ಎನ್ನಲಾಗಿದೆ. ಯುವತಿಗೆ ಹೊಸ ವರ್ಷದ ಆಚರಣೆಗೆ ಜೊತೆಗೆ ಬರುವಂತೆ ಪೀಡಿಸುತ್ತಿದ್ದನಂತೆ. ಈ ಹಿನ್ನಲೆಯಲ್ಲಿ ಯುವತಿ ಜಾನ್ ಕಿರುಕುಳ ತಾಳಲಾರದೆ ರಾಮಮೂರ್ತಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.


ಅಲ್ಲದೇ ಶಾಪಿಂಗ್ ಹೋಗೋಣ ಬಾ ಅಂತಾ ಜಾನ್ ಗೆ ಯುವತಿಯಿಂದ ಹೇಳಿಸಿ ಕರೆಸಿದ ಆಕೆಯ ಸ್ನೇಹಿತರು ಅಲ್ಲಿಗೆ ಬಂದ ಶಿಕ್ಷಕನಿಗೆ ಹಿಗ್ಗಾಮಗ್ಗಾ ಥಳಿಸಿದ್ದಾರೆ. ಬಳಿಕ ಪೊಲೀಸರು ಬಂದು ಆತನನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ