ಶಾಸಕರಾದ ಬಳಿಕ ಮೊದಲ ಬಾರಿಗೆ ಒಟ್ಟಿಗೆ ಸೇರಿರುವ ನೂತನ ಶಾಸಕರು ನಾಳೆ ಸಿಎಂ ಭೇಟಿಯಾಗಿ ಹೊಸ ವರ್ಷದ ಶುಭಾಶಯ ಕೋರುವ ಜೊತೆಗೆ ಸಂಪುಟ ವಿಸ್ತರಣೆಯ ಬಗ್ಗೆ ಜತೆ ಚರ್ಚೆ ನಡೆಸಲಿದ್ದು, ಇನ್ನೂ ಸಚಿವ ಸ್ಥಾನ ನೀಡದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಿದ್ದಾರೆ ಎನ್ನಲಾಗಿದೆ.
ಅಲ್ಲದೇ ಸಚಿವರಾಗದೆ ಇದ್ರೆ ಅಧಿವೇಶನಕ್ಕೆ ನಾವು ಹಾಜರಾಗಲ್ಲ. ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಬರ್ತೇವೆ. ಸಚಿವರಾಗದೆ ಅಧಿವೇಶನಕ್ಕೆ ಬಂದ್ರೆ ನಮಗೆ ಅವಮಾನ. ಈಗಾಗಲೇ ಕಾಂಗ್ರೆಸ್ ನವರು ನಮಗೆ ಅವಮಾನ ಮಾಡಿದ್ದಾರೆ. ಅಧಿವೇಶನಕ್ಕೆ ಬಂದ್ರೆ ಕಾಂಗ್ರೆಸ್ ನವರು ನಮ್ಮ ಕಾಲೆಳೆಯುತ್ತಾರೆ. ಕಾಂಗ್ರೆಸ್ ನಲ್ಲೂ ಶಾಸಕರಾಗಿದ್ದೆವು ಇಲ್ಲೂ ಶಾಸಕರಾಗಿದ್ದೇವೆ.
ಇದಕ್ಕಾಗಿ ನಾವು ಕಾಂಗ್ರೆಸ್ ಗೆ ರಾಜೀನಾಮೆ ನೀಡಬೇಕಿತ್ತಾ? ಹೀಗಾಗಿ ಅಧಿವೇಶನಕ್ಕೆ ಹಾಜರಾಗದಿರಲು ಎಲ್ಲರು ತೀರ್ಮಾನ ಮಾಡಿದ್ದು, ಈ ಬಗ್ಗೆ ಸಿಎಂ ಗಮನಕ್ಕೆ ತರಲು ಹೊಸ ವರ್ಷದ ಶುಭಾಶಯ ಹೇಳುವ ನೆಪದಲ್ಲಿ ನಾಳೆ ಸಿಎಂ ಯನ್ನು ಭೇಟಿ ಮಾಡಿ ಚರ್ಚೆ ನಡೆಸಲು ಮುಹೂರ್ತ ಫಿಕ್ಸ್ ಮಾಡಿದ್ದಾರೆ ಎಂಬ ಮಾತು ಕೇಳಿಬಂದಿದೆ.