ಬೆಂಗಳೂರು ಬಂದ್: ಬಸ್, ಮೆಟ್ರೋ ಇದ್ದರೂ ಪ್ರಯಾಣಿಕರು ವಿರಳ

ಮಂಗಳವಾರ, 26 ಸೆಪ್ಟಂಬರ್ 2023 (09:40 IST)
ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಸಂಘಟನೆಗಳು ಇಂದು ಕರೆ ನೀಡಿರುವ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಬಲವಂತವಾಗಿ ಬಂದ್ ಮಾಡಿಸುವಂತಿಲ್ಲ ಎಂದು ಈಗಾಗಲೇ ಪೊಲೀಸ್ ಕಮಿಷನರ್ ಎಚ್ಚರಿಕೆ ನೀಡಿದ್ದಾರೆ. ಹಾಗಿದ್ದರೂ ಮುನ್ನೆಚ್ಚರಿಕೆ ಕ್ರಮವಾಗಿ ಸೆಕ್ಷನ್ 144 ಹಾಕಲಾಗಿದೆ.

ಇಂದಿನ ಬಂದ್ ಗೆ ರಾಜ್ಯ ಸರ್ಕಾರದ ಬೆಂಬಲವಿಲ್ಲ. ಹೀಗಾಗಿ ಸರ್ಕಾರಿ ಬಸ್ ಗಳು, ಮೆಟ್ರೋ ಸೇವೆ ಎಂದಿನಂತೆ ಇದೆ. ಆದರೆ ಬಸ್ ನಿಲ್ದಾಣಗಳಲ್ಲಿ ಎಂದಿನಂತೆ ಪ್ರಯಾಣಿಕರ ಸಂಖ್ಯೆ ಇಲ್ಲ. ಬೆಳಗ್ಗಿನ ಅವಧಿಯಲ್ಲಿ ವಿರಳವಾಗಿದ್ದರೂ ಕೆಲವೊಂದು ಆಟೋ ಓಡಾಡುತ್ತಿದೆ. ಇನ್ನು, ಆಸ್ಪತ್ರೆ, ಮೆಡಿಕಲ್, ಹಾಲು, ಹಣ್ಣು, ತರಕಾರಿ ಸೇವೆಗಳಿಗೆ ತೊಂದರೆಯಾಗಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ