ಪೋಷಕರು ಹಾಗೂ ಒಡಹುಟ್ಟಿದವರನ್ನು ಕಡೆಗಾಣಿಸಿದರೆ ಸರ್ಕಾರಿ ನೌಕರರ ಸಂಬಳ ಕಟ್
ಶನಿವಾರ, 28 ಜುಲೈ 2018 (14:37 IST)
ಅಸ್ಸಾಂ : ಪೋಷಕರನ್ನು ನೋಡಿಕೊಳ್ಳದಿದ್ದರೆ ಮಗನಿಗೆ ನೀಡಿದ ಆಸ್ತಿಯನ್ನು ತಂದೆ ವಾಪಾಸು ಪಡೆಯಬುಹುದು ಎಂದು ಇತ್ತೀಚೆಗಷ್ಟೇ ಬಾಂಬೆ ಹೈಕೋರ್ಟ್ ತೀರ್ಪನ್ನು ನೀಡಿತ್ತು. ಅದೇರೀತಿ ಇದೀಗಪೋಷಕರು ಹಾಗೂ ಒಡಹುಟ್ಟಿದವರನ್ನು ಕಡೆಗಣಿಸಿದರೆ ಅಂತಹವರ ಸರ್ಕಾರಿ ಸಂಬಳವನ್ನು ಕಟ್ ಮಾಡುವುದಾಗಿ ಅಸ್ಸಾಂ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತಂದಿದೆ.
ಈ ಕಾನೂನು ಅಕ್ಟೋಬರ್ 2 ರಿಂದ ಅಸ್ಸಾಂನಲ್ಲಿ ಜಾರಿಗೆ ಬರಲಿದ್ದು, ಅದರ ಪ್ರಕಾರ ಯಾವುದೇ ಆದಾಯವಿರದ ಪೋಷಕರು ಹಾಗೂ ದಿವ್ಯಾಂಗ ಸಹೋದರ ಹಾಗೂ ಸಹೋದರಿಯರನ್ನು ನೌಕರರು ಸರಿಯಾಗಿ ನೋಡಿಕೊಳ್ಳ ಬೇಕು. ಒಂದು ವೇಳೆ ನೋಡಿಕೊಳ್ಳದೆ ಹೋದರೇ ಸರಕಾರಿ ನೌಕರರ ಒಂದು ತಿಂಗಳ ಒಟ್ಟು ವೇತನದಲ್ಲಿ ಶೇ. 10 - 15 ರಷ್ಟು ಕಡಿತಗೊಳ್ಳಲಿದೆ ಎನ್ನಲಾಗಿದೆ.
ಕೊನೆಗಾಲದಲ್ಲಿ ಪೋಷಕರು ವೃದ್ದಶ್ರಮಗಳಲ್ಲಿ ಕಾಲಕಳೆಯುವುದನ್ನು ತಪ್ಪಿಸುವ ಅಸ್ಸಾಂ ಸರ್ಕಾರದ ಈ ಕಾನೂನು ದೇಶವ್ಯಾಪ್ತಿ ವಿಸ್ತರಣೆ ಮಾಡುವಂತೆ ಜನತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ