ಸರ್ವಪಕ್ಷ ಸಭೆಯಲ್ಲಿ ರೈತರ ಬಿಡುಗಡೆಗೆ ಕ್ರಮ: ಸಿಎಂಗೆ ಜಾರಕಿಹೊಳಿ ಒತ್ತಾಯ
ಗುರುವಾರ, 4 ಆಗಸ್ಟ್ 2016 (17:56 IST)
ಮಹಾದಾಯಿ ಹೋರಾಟದ ವೇಳೆ ಬಂಧನಕೊಳ್ಳಗಾದ ಅಮಾಯಕ ರೈತರನ್ನು ಅಗಸ್ಟ್ 7 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕರೆದಿರುವ ಸರ್ವಪಕ್ಷ ಸಭೆಯಲ್ಲಿ ತೀರ್ಮಾನ ಕೈಗೊಂಡು ಬಿಡುಗಡೆಗೊಳಿಸಬೇಕು ಎಂದು ಸಣ್ಣ ಕೈಗಾರಿಕಾ ಖಾತೆ ಸಚಿವ ರಮೇಶ್ ಜಾರಕಿಹೋಳಿ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನ್ಯಾಯಾಧೀಕರಣ ತೀರ್ಪು ವಿರೋಧಿಸಿ ರೈತರು ಪ್ರತಿಭಟನೆ ಕೈಗೊಂಡಿದ್ದಾರೆಯೇ ಹೊರತು ಅವರು ಯಾರನ್ನು ಕೊಲೆ ಮಾಡಲು ಬಂದಿರಲಿಲ್ಲ. ಅವರು ಯಾವುದೇ ಉದ್ವೇಗದಲ್ಲಿ ತಪ್ಪ ಮಾಡಿರಬಹುದು. ಆದರೆ, ರೈತರ ಮೇಲೆ ಲಾಠಿ ಬೀಸಿರುವುದು ಖಂಡನೀಯ ಎಂದು ತಿಳಿಸಿದರು.
ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಗಸ್ಟ್ 7ರಂದು ಸರ್ವಪಕ್ಷ ಸಭೆಯಲ್ಲಿ ಕರೆದಿದ್ದಾರೆ. ಈ ಸಭೆಯಲ್ಲಿ ಅಮಾಯಕ ರೈತರನ್ನು ಬಿಡುಗಡೆ ಮಾಡುವ ಕುರಿತು ನಿರ್ಧಾರ ಕೈಗೊಳ್ಳಬೇಕು. ರೈತರನ್ನು ಕ್ರಿಮಿನಲ್‌ಗಳಂತೆ ಕಾಣಬಾರದು ಎಂದು ಸಣ್ಣ ಕೈಗಾರಿಕಾ ಖಾತೆ ಸಚಿವ ರಮೇಶ್ ಜಾರಕಿಹೋಳಿ ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.