ಇಬ್ಬರು ಮಕ್ಕಳನ್ನು ದತ್ತು ಪಡೆದ ಜನಾರ್ದನ ರೆಡ್ಡಿ

ಸೋಮವಾರ, 20 ಮಾರ್ಚ್ 2023 (09:02 IST)
ಕೊಪ್ಪಳ : ಅನಾರೋಗ್ಯಕ್ಕೆ ಒಳಗಾಗಿದ್ದ ತಂದೆ, ತಾಯಿಯನ್ನು ಕಳೆದುಕೊಂಡಿರುವ ಇಬ್ಬರು ಮಕ್ಕಳನ್ನು ಕೆಆರ್ಪಿಪಿ ಪಕ್ಷದ ಸಂಸ್ಥಾಪಕ ಜನಾರ್ದನ ರೆಡ್ಡಿ ದತ್ತು ಪಡೆದುಕೊಂಡರು.
 
ಕೊಪ್ಪಳದ ಗಂಗಾವತಿ ನಗರದ ವಿರುಪಾಪುರ ತಾಂಡದಲ್ಲಿ ಕೆಆರ್ಪಿಪಿ ಪಕ್ಷದ ವತಿಯಿಂದ ಭಾನುವಾರ ಹಮ್ಮಿಕೊಂಡ ಪ್ರಚಾರದ ಸಮಯದಲ್ಲಿ ಮಕ್ಕಳನ್ನು ದತ್ತು ಪಡೆದರು. 

ವಿರುಪಾಪುರ ತಾಂಡದ ನಿವಾಸಿಯಾಗಿರುವ ಈ ಇಬ್ಬರು ಮಕ್ಕಳು ತಂದೆ-ತಾಯಿಯನ್ನು ಕಳೆದುಕೊಂಡು ಸೋದರ ಮಾವನ ಮನೆಯಲ್ಲಿ ವಾಸವಿದ್ದರು. ಸೋದರ ಮಾವನಿಗೂ ಕಷ್ಟ ಇರುವುದರಿಂದ ಜನಾರ್ದನ ರೆಡ್ಡಿಯವರು ಜ್ಯೋತಿ ಸ್ವರೂಪ್, ವೇಣು ಎನ್ನುವ ಇಬ್ಬರು ಮಕ್ಕಳನ್ನು ದತ್ತು ಪಡೆಕೊಂಡಿದ್ದಾರೆ. ಮಕ್ಕಳ ಶಿಕ್ಷಣ ಸೇರಿದಂತೆ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ನನ್ನ ಮಕ್ಕಳಂತೆ ನೋಡಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ