ಆಂಬಿಡೆಂಟ್ ಹಗರಣ: ಜನಾರ್ಧನ ರೆಡ್ಡಿ ಜಾಮೀನು ತೀರ್ಪು ಇಂದು
ನ್ಯಾಯಾಂಗ ಬಂಧನದಲ್ಲಿರುವ ರೆಡ್ಡಿ ಜಾಮೀನು ಅರ್ಜಿಯನ್ನು 6 ನೇ ಎಸಿಎಂಎಂ ಕೋರ್ಟ್ ವಿಚಾರಣೆ ನಡೆಸಿ ಇಂದು ತೀರ್ಪು ನೀಡಲಿದೆ. ಸದ್ಯಕ್ಕೆ ರೆಡ್ಡಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾರೆ.
ನಿನ್ನೆ ನ್ಯಾಯಾಲಯದಲ್ಲಿ ರೆಡ್ಡಿ ಪರ ವಾದ ಮಂಡಿಸಿದ್ದ ನ್ಯಾಯವಾದಿ ಚಂದ್ರಶೇಖರ್ ಆರೋಪಿ ನಂ.1 ಸ್ಥಾನದಲ್ಲಿರುವ ಆಂಬಿಡೆಂಟ್ ಕಂಪನಿಯ ಅಹಮ್ಮದ್ ಫರೀದ್ ಜಾಮೀನಿನ ಮೇಲೆ ಹೊರಗಡೆ ಹಾಯಾಗಿ ತಿರುಗಿಕೊಂಡಿರುವಾಗ ನನ್ನ ಕಕ್ಷಿದಾರರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದರ ಔಚಿತ್ಯವೇನು ಎಂದು ವಾದ ಮಂಡಿಸಿದ್ದರು. ಒಂದು ವೇಳೆ ಕೋರ್ಟ್ ಈ ವಾದ ಪರಿಗಣಿಸಿದರೆ ರೆಡ್ಡಿಗೆ ಜಾಮೀನು ಸಿಗುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.