ಸಮ್ಮಿಶ್ರ ಸರಕಾರದ ವಿರುದ್ಧ ರೆಡ್ಡಿ ಬೆಂಬಲಿಗರು ಹೇಳುತ್ತಿರೋದು ಏನು ಗೊತ್ತಾ?

ಮಂಗಳವಾರ, 13 ನವೆಂಬರ್ 2018 (19:08 IST)
ಯಾವುದೇ ಕೃತ್ಯದಲ್ಲಿ ಭಾಗಿಯಾಗದ ಮಾಜಿ ಸಚಿವ ಹಾಗೂ ಗಣಿಧಣಿ ಜನಾರ್ಧನ ರೆಡ್ಡಿಯನ್ನು ವಿಚಾರಣೆಗೆ ಎಂದು ಕರೆದು ಬಂಧಿಸಿರುವ ಕ್ರಮಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ.

ಯಾವುದೇ ಕೃತ್ಯದಲ್ಲಿ ಭಾಗಿಯಾಗದಿದ್ದ ಜನಾರ್ದನ ರೆಡ್ಡಿಯನ್ನು ವಿಚಾರಣೆಗೆ ಎಂದು ಕರೆಯಿಸಿ ಬಂಧಿಸಿದ್ದು ಎಷ್ಟು ಸರಿ ಎಂದು ಮಹಿಳಾ ಮೋರ್ಚಾದ ಜಿಲ್ಲಾಧ್ಯಕ್ಷೆ ಶಶಿಕಲಾ ಕ್ರಿಷ್ಣ ಮೋಹನ್ ಪ್ರಶ್ನಿಸಿದ್ದಾರೆ.

ಬಳ್ಳಾರಿ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜಕೀಯ ಪ್ರೇರಿತವಾಗಿ ರೆಡ್ಡಿಯನ್ನು ಬಂಧಿಸಲಾಗಿದೆ. ರಾಜಮಹಲ್ ಜುವೆಲರ್ಸ್ ಮಾಲೀಕ ರಮೇಶ್ ನ ಮೇಲೆ ದೈಹಿಕ ಹಲ್ಲೆ ನಡೆಸಿದ್ದಾರೆ. ಹೀಗೆ ತಪ್ಪು ಮಾಡದಿದ್ದರೂ ಬಲವಂತವಾಗಿ ಅರೋಪವನ್ನು ಒಪ್ಪಿಕೊಳ್ಳುವಂತಹ ಒತ್ತಡ ತರುವ ಉದ್ದೇಶ ಹಾಗೂ ರಾಜಕೀಯವಾಗಿ ರೆಡ್ಡಿಯನ್ನು ಮುಗಿಸಲು ಸಮ್ಮಿಶ್ರ ಸರ್ಕಾರ ಮುಂದಾಗಿದೆ ಎಂದು ಆರೋಪಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ