‘ಪತ್ನಿ ಮಕ್ಕಳಿಂದ ನನ್ನನ್ನು ದೂರವಿಟ್ಟ ಕಾಂಗ್ರೆಸ್ ನವರಿಗೆ ತಕ್ಕ ಶಾಸ್ತ್ರಿ ಮಾಡ್ತೇನೆ’

ಸೋಮವಾರ, 15 ಜನವರಿ 2018 (09:31 IST)
ಬೆಂಗಳೂರು: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಜೈಲು ಸೇರಿ ಇದೀಗ ಹೊರಬಂದಿರುವ ಮಾಜಿ ಸಚಿವ ಜನಾರ್ಧನ ರೆಡ್ಡಿ ಸಿಎಂ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
 

ಗಣಿ ಅಕ್ರಮಗಳ ಹಿನ್ನಲೆಯಲ್ಲಿ ಬಿಜೆಪಿ ಅವರನ್ನು ಸಕ್ರಿಯ ರಾಜಕಾರಣದಿಂದ ದೂರವಿಟ್ಟಿದೆ. ಆದರೆ ಒಂದು ವೇಳೆ ತಮಗೆ ಬಿಜೆಪಿ ಹೈಕಮಾಂಡ್ ಅಧಿಕಾರ ಕೊಟ್ಟರೆ ಮತ್ತೆ ಸಿಎಂ ಸಿದ್ದರಾಮಯ್ಯ ಮನೆಯಿಂದ ಹೊರ ಬರದಂತೆ ನೋಡಿಕೊಳ್ಳುತ್ತೇನೆ ಎಂದು ಗುಡುಗಿದ್ದಾರೆ.

‘ನನ್ನ ಮೇಲೆ ಇಲ್ಲಸಲ್ಲದ 116 ಕೇಸ್ ಹಾಕಿ  43 ತಿಂಗಳುಗಳ ಕಾಲ ಜೈಲಿಗೆ ಕಳಿಸಿದರು. ನಂತರ  ನನ್ನಿಂದ ಒಂದು ರೂಪಾಯಿ ಕೂಡಾ ಅವರಿಗೆ ವಸೂಲಿ ಮಾಡಲಾಗಿಲ್ಲ. ಜೈಲಿಗೆ ಹಾಕಿ ನನ್ನನ್ನು ಪತ್ನಿ, ಮಕ್ಕಳಿಂದ ದೂರವಿಟ್ಟ ಕಾಂಗ್ರೆಸ್, ಸೋನಿಯಾ ಗಾಂಧಿ,  ಸಿಎಂ ಸಿದ್ದರಾಮಯ್ಯ ಮುಂತಾದ ಕಾಂಗ್ರೆಸ್ಸಿಗರಿಗೆ ತಕ್ಕ ಶಾಸ್ತ್ರಿ ಆಗಲಿ’ ಎಂದು ಗಣಿ ದಣಿ ಶಾಪ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ