ಬಿಕೋ ಅನ್ನುತ್ತಿದೆ ಜಾರಕಿಹೊಳಿ ನಿವಾಸ
ಸಚಿವ ಸ್ಥಾನ ಕೈತಪ್ಪಿದ್ದರಿಂದಾಗಿ ಯಾರ ಸಂಪರ್ಕಕ್ಕೆ ಸಿಗದಿರುವ ರಮೇಶ ಜಾರಕಿಹೊಳಿ ನಿಗೂಢ ಸ್ಥಳದಲ್ಲಿದ್ದರೆ, ಸದಾ ಜನರಿಂದ ಗಿಜುಗುಡುತ್ತಿದ್ದ ಅವರ ನಿವಾಸ ಕಳೆದೊಂದು ವಾರದಿಂದ ಯಾರೂ ಇಲ್ಲದೇ ಭಣಗುಡುತ್ತಿದೆ.
ದಿನನಿತ್ಯ ಜನರಿಂದ ಗಿಜಗುಡುತ್ತಿದ್ದ ಮನೆ ಇಗ ಬಿಕೋ ಎನ್ನುತ್ತಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದಲ್ಲಿರುವ ರಮೇಶ ಜಾರಕಿಹೊಳಿ ನಿವಾಸದಲ್ಲಿ ಈಗ ಜನರಿಲ್ಲ.
ಕೇವಲ ಕಾರು ಚಾಲಕರು ಮತ್ತು ಮನೆಯಾಳುಗಳು ಬಿಟ್ರೆ ಈ ನಿವಾಸದಲ್ಲಿ ಯಾರು ಇಲ್ಲ. ಸಾಹುಕಾರರ ನಡೆಯನ್ನೆ ಇಡೀ ಕ್ಷೇತ್ರದ ಜನರು ಕಾಯುತ್ತಿದ್ದಾರೆ. ಏನಾಗುತ್ತೆ ಸಾಹುಕಾರರ ನಡೆ ಎಂದು ಕ್ಷೇತ್ರದ ಜನರು ಚರ್ಚೆಯಲ್ಲಿ ತೊಡುಗಿ, ಗೊಂದಲದಲ್ಲಿದ್ದಾರೆ.
ಕಳೆದ ಒಂದು ವಾರದಿಂದ ಅಜ್ಞಾತ ಸ್ಥಳದಲ್ಲಿರುವ ಸಚಿವ ಮನೆ ಕಡೆನೂ ಬಂದಿಲ್ಲ. ಕ್ಷೇತ್ರದಲ್ಲಿ ಎಷ್ಟೆ ತಡವಾದರೂ ಮನೆಗೆ ಬರುತ್ತಿದ್ದ ರಮೇಶ ಜಾರಕಿಹೊಳಿ ಇಲ್ಲದ ಮನೆಕೂಡಾ ಬಿಕೋ ಅಂತ ಈಗ ಅನ್ನುತ್ತಿದೆ.