ರಾಜಧಾನಿಯ ಜಯನಗರ ವಾಣಿಜ್ಯ ಸಂಕೀರ್ಣದ ಹೊಸ ಕಟ್ಟಡದ ಕಾಮಗಾರಿ ಶೀಘ್ರದಲ್ಲೆ ಪೂರ್ಣ

ಭಾನುವಾರ, 18 ಜುಲೈ 2021 (20:13 IST)
ಬೆಂಗಳೂರು: ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಜಯನಗರ ವಾಣಿಜ್ಯ ಸಂಕೀರ್ಣದ ಕಟ್ಟಡದ ನೀಲಿನಕ್ಷೆಯನ್ನು ಪರಿಶೀಲಿಸಿ, ಶೀಘ್ರದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಪೂರ್ಣಗೊಳಿಸಲಾಗುವುದು ಎಂದು ಹೇಳಿದರು.
 
ಜಯನಗರ ವಿಧಾನಸಭಾ ಕ್ಷೇತ್ರ ,ನಾಲ್ಕನೇಯ ಬ್ಲಾಕ್ ನ ಪ್ರಸಿದ್ಧ ಜಯನಗರ ವಾಣಿಜ್ಯ ಸಂಕೀರ್ಣಕ್ಕೆ (ಕಾಂಪ್ಲೆಕ್ಸ್) ಶನಿವಾರ ಶಾಸಕಿ ಸೌಮ್ಯರೆಡ್ಡಿ, ಮುಖ್ಯ ಆಯುಕ್ತ  ಗೌರವ್ ಗುಪ್ತಾ, ವಿಶೇಷ ಆಯುಕ್ತೆ ತುಳಸಿ ಮದ್ದಿನೇನಿ ಮತ್ತು ಮಾಜಿ ಆಡಳಿತ ಪಕ್ಷದ ನಾಯಕ ಎನ್.ನಾಗರಾಜ್  ಅಧಿಕಾರಿಗಳ ಜೊತೆಯಲ್ಲಿ ಭೇಟಿ ನೀಡಿ , ವಾಣಿಜ್ಯ ಸಂಕೀರ್ಣವನ್ನು ಪರಿಶೀಲನೆ ಮಾಡಿದರು.
 
ಶಾಸಕಿ ಸೌಮ್ಯರೆಡ್ಡಿ  ಮಾತನಾಡಿ ಜಯನಗರ ವಾಣಿಜ್ಯ ಸಂಕೀರ್ಣ ಬೆಂಗಳೂರಿನ ಪ್ರತಿಷ್ಟಿತ ಶಾಪಿಂಗ್ ಮಾಲ್ ಆಗಿತ್ತು. ಕಳೆದ ಆರು ವರ್ಷಗಳಲ್ಲಿ ವಾಣಿಜ್ಯ ಕಟ್ಟಡ ಆಧುನಿಕರಣ ಮಾಡಲು ಯೋಜನೆ ರೂಪಿಸಿ ,ಕಾಮಗಾರಿ ನಿಧಾನಗತಿಯಿಂದ ಸಾರ್ವಜನಿಕರಿಗೆ ಬಳಕೆಯಾಗದೇ  ಅನುಪಯುಕ್ತವಾಗಿದೆ .ಕೊಡಲೆ ಮುಖ್ಯ ಆಯುಕ್ತರು ಗಮನಹರಿಸಿ ಜಯನಗರ ವಾಣಿಜ್ಯ ಸಂಕೀರ್ಣದ (ಕಾಂಪ್ಲೆಕ್ಸ್) ಕಾಮಗಾರಿ ಅತಿಶೀಘ್ರದಲ್ಲಿ ಪೂರ್ಣಗೊಳಿಸಿ. ವಾಣಿಜ್ಯ ಸಂಕೀರ್ಣದ ಮಳಿಗೆದಾರರಿಗೆ ಪರ್ಯಾಯ ವ್ಯವಸ್ಥೆ ಯನ್ನು ಮಾಡಿಕೊಡಬೇಕೆಂದು ಗೌರವ್ ಗುಪ್ತಾ ರಿಗೆ ಮನವಿ ಮಾಡಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ