ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಷಣೆ
ಬೆಳ್ಳಂಬೆಳಗ್ಗೆಯೇ ಜೆಸಿಬಿ ವಾಹನವು ಘರ್ಜಿಸಿದೆ. ಖಾಸಗಿಯವರಿಂದ ಒತ್ತುವರಿಯಾಗಿದ್ದ ಸರ್ಕಾರದ ಜಮೀನನ್ನು ವಶಕ್ಕೆ ಪಡೆಯಲಾಗಿದೆ.
ಕೋಲಾರದ ಆರ್ ಜಿ ಲೇಔಟ್ ಪ್ರದೇಶದಲ್ಲಿ ವಾಲ್ಮೀಕಿ ಭವನ ನಿರ್ಮಾಣ ಮಾಡಲು ಸರ್ಕಾರ ಜಮೀನು ಮಂಜೂರು ಮಾಡಿದೆ. ಸದರಿ ಜಮೀನಿನಲ್ಲಿ ಈಗಾಗಲೇ ಕಾಮಗಾರಿಯೂ ಶುರುವಾಗಿದೆ. ಈ ಮಧ್ಯೆ ವಾಲ್ಮೀಕಿ ಭವನಕ್ಕೆ ಸೇರಿರುವ ಜಮೀನಿನ ಪೈಕಿ ಎರಡೂಕಾಲು ಗುಂಟೆ ವಿಸ್ತೀರ್ಣದ ಪ್ರದೇಶವು ಒತ್ತುವರಿಯಾಗಿದೆ ಅನ್ನೋ ದೂರು ಕೇಳಿ ಬಂದಿತ್ತು.
ಪಕ್ಕದಲ್ಲಿಯೇ ಹೊಸದಾಗಿ ನಿರ್ಮಾಣ ಆಗ್ತಿರೋ ಕಲ್ಯಾಣ ಮಂಟಪದವರು ವಾಲ್ಮೀಕಿ ಭವನದ ಜಮೀನನ್ನು ಅತಿಕ್ರಮಿಸಿದ್ದಾರೆ ಅನ್ನೋ ದೂರು ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿತ್ತು. ಈ ಹಿನ್ನಲೆಯಲ್ಲಿ ಜಮೀನಿನ ಸರ್ವೇ ನಡೆದು ಅತಿಕ್ರಮಿಸಿರುವ ಆರೋಪವೂ ಸಾಬೀತಾಗಿತ್ತು. ಇದೆಲ್ಲದರ ಫಲವಾಗಿ ಅಧಿಕಾರಿಗಳ ತಂಡ ಸಹಿತ ಸ್ಥಳಕ್ಕೆ ಧಾವಿಸಿದ ಜಿಲ್ಲಾಧಿಕಾರಿ ಮಂಜುನಾಥ, ಒತ್ತುವರಿ ಸ್ಥಳದಲ್ಲಿನ ಅನಧಿಕೃತವಾಗಿ ನಿರ್ಮಾಣಗಳನ್ನು ತೆರವಿಗೆ ಸೂಚಿಸಿದರು. ಒತ್ತುವರಿಯಾಗಿದ್ದ ಜಮೀನನ್ನು ವಶಕ್ಕೆ ಪಡೆದರು.