ಜೆಡಿಎಸ್ ಶಾಸಕನಿಂದ ಜಾತಿವಾರು ಗ್ರಾಮ ವಾಸ್ತವ್ಯ…!

ಶುಕ್ರವಾರ, 3 ಆಗಸ್ಟ್ 2018 (17:26 IST)
ರಾಜ್ಯದ ಕೆಲವು ಶಾಸಕರು ತಮ್ಮ  ಕ್ಷೇತ್ರದಲ್ಲಿನ  ಸಮಸ್ಯೆ ಅರಿಯಲು ಗ್ರಾಮ ವಾಸ್ತವ್ಯ ಮಾಡೋದು ಕಾಮನ್. ಆದ್ರೆ ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಜೆಡಿಎಸ್ ಶಾಸಕ ಡಾ.ಕೆ.ಅನ್ನದಾನಿ ಜಾತಿವಾರು ಗ್ರಾಮ ವಾಸ್ತವ್ಯ ಮಾಡ್ತಿದ್ದಾರೆ.

 
ರಾಜ್ಯದಲ್ಲಿ ಜನರಿಂದ ಆಯ್ಕೆಯಾಗಿರುವ ಶಾಸಕರು ಗ್ರಾಮ ವಾಸ್ತವ್ಯ ಮಾಡಿ ಜನ್ರ ಸಮಸ್ಯೆ ಕೇಳೋದು ಕಾಮನ್. ಆದ್ರಲ್ಲೂ ಹೆಚ್.ಡಿ. ಕುಮಾರಸ್ವಾಮಿ ಸಿಎಂ ಆದ ಮೇಲಂತೂ ಶಾಸಕರ ಗ್ರಾಮ ವಾಸ್ತವ್ಯ ಹೆಚ್ಚಾಗಿದೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಕ್ಷೇತ್ರದ ಶಾಸಕ ಅನ್ನದಾನಿ ಜಾತಿ ವಾರು ಗ್ರಾಮ ವಾಸ್ತವ್ಯ ಮಾಡ್ತಿದ್ದಾರೆ. ವಾರದ ಹಿಂದೆ ಹಲಗೂರು ಹೋಬಳಿಯ ಸಿದ್ದಯ್ಯನ ದೊಡ್ಡಿ ಗ್ರಾಮದ ದಲಿತರ ಮನೆಯಲ್ಲಿ ವಾಸ್ತವ್ಯ ಹೂಡಿದ್ರೆ, ಇವತ್ತು ಬೆಳಕವಾಡಿ ಬಳಿಯ ಐನೋರ ದೊಡ್ಡಿ ಗ್ರಾಮದ ಉಪ್ಪಾರರ ಮನೆಯಲ್ಲಿ ವಾಸ್ತವ್ಯ ಹೂಡಿದ್ದು, ಮುಂದಿನ ವಾರ ಮತ್ತೊಬ್ಬರ ಮನೆಯಲ್ಲಿ ವಾಸ್ತವ್ಯ ಮಾಡೋದಾಗಿ ಹೇಳಿದ್ರು.

 
ಇನ್ನು  ಐನೋರ ದೊಡ್ಡಿ ಗ್ರಾಮದಲ್ಲಿ ವಾಸ್ತವ್ಯ ಹೂಡಿದ್ದ ಗ್ರಾಮಸ್ಥರು ಕೂಡ ಅನ್ನದಾನಿ ಕೆಲ್ಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಆಯ್ಕೆಯಾದ ಎರಡೇ ಎರಡು ದಿನಕ್ಕೆ ಜನಪ್ರತಿನಿಧಿಗಳು ಜನರ ಮಧ್ಯೆ ಬಂದಿರುವುದು ಖುಷಿ ತಂದಿದೆ ಎಂದ್ರು.

ಒಟ್ಟಾರೆ ಶಾಸಕ ಅನ್ನದಾನಿ ಭರ್ಜರಿ ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಗ್ರಾಮಕ್ಕೆ ಭೇಟಿ ಕೊಟ್ಟಾಗ ಅವ್ರು ಹೇಳಿರೋ ಸಮಸ್ಯೆಯನ್ನ ಬಗೆ ಹರಿಸುವ ಕೆಲ್ಸಕ್ಕೆ ಮುಂದಾಗಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ