ಮಂಡ್ಯ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ನಾಗಮಂಗಲದಲ್ಲಿ ಶಿವರಾಮೇಗೌಡ- ಚಲುವರಾಯಸ್ವಾಮಿ ಜಂಟಿ ಸಭೆ ನಡೆಸಿದರು. ಈ ಸಭೆಯಲ್ಲಿ ಜೆಡಿಎಸ್ ಅಭ್ಯರ್ಥಿ ಚೆಲುವರಾಯಸ್ವಾಮಿಯನ್ನು ಹಾಡಿ ಹೊಗಳಿದ ಘಟನೆ ನಡೆದಿದೆ.
ಕಾಂಗ್ರೆಸ್ ಮುಖಂಡ ಚಲುವರಾಯಸ್ವಾಮಿ ಗೆ ಜೈಕಾರ ಹಾಕಿದ ಜೆಡಿಎಸ್ ಅಭ್ಯರ್ಥಿ ಎಲ್.ಆರ್.ಶಿವರಾಮೇಗೌಡ ಗಮನ ಸೆಳೆದರು.
ಕಾಂಗ್ರೆಸ್ ಕಚೇರಿಯಲ್ಲಿ ಎಲ್.ಆರ್.ಎಸ್. ಮತಯಾಚನೆ ಮಾಡಿದರು. ನಾವು ಕನಸು ಮನಸ್ಸಿನಲ್ಲಿ ಜೆಡಿಎಸ್- ಕಾಂಗ್ರೆಸ್ ಒಂದಾಗ್ತೇವೆ ಎಂದು ಅಂದುಕೊಂಡಿರಲಿಲ್ಲ. ನಾನು ಚಲುವರಾಯಸ್ವಾಮಿ ವಿರುದ್ದ ಸೋತಿದ್ದೆ. ಆದ್ರೆ ನಾನು ಅವರ ಜೊತೆ ಮಾತನಾಡುತ್ತಿರಲಿಲ್ಲ. ಆದ್ರೆ ವೈಯಕ್ತಿಕವಾಗಿ ಯಾವುದೇ ದ್ವೇಷ ಇಲ್ಲ. ನಾವೇನು ಕಡಿಮೆ ಇಲ್ಲ 78 ಗೆದ್ದೋರನ್ನ ಬುಟ್ಟು 37 ಗೆದ್ದು ಸಿಎಂ ಆಗಿದ್ದೇವೆ ಎಂದರು. ಮೈತ್ರಿ ನನ್ನ -ಚಲುವರಾಯಸ್ವಾಮಿ ನಿರ್ಧಾರ ಅಲ್ಲ.
ದೇವೇಗೌಡರು, ರಾಹುಲ್ ಗಾಂಧಿ ತೀರ್ಮಾನ ಅದಾಗಿದೆ ಎಂದರು.
ಸಭೆಯಲ್ಲಿ ಚಲುವರಾಯಸ್ವಾಮಿಯನ್ನು ಹಾಡಿ ಹೊಗಳಿದ ಜೆಡಿಎಸ್ ಅಭ್ಯರ್ಥಿ ಶಿವರಾಮೇಗೌಡ ಗಮನ ಸೆಳೆದರು.