ಜೆಡಿಎಸ್ ತೆಕ್ಕೆಗೆ ಮನ್ಮುಲ್ : ಬಿಜೆಪಿಗೆ ಭಾರೀ ಆಘಾತ

ಗುರುವಾರ, 3 ಅಕ್ಟೋಬರ್ 2019 (17:15 IST)
ಮಂಡ್ಯದ ಮನ್ಮುಲ್ ಅದೃಷ್ಟದ ಮೂಲಕ ಜೆಡಿಎಸ್ ಪಾಲಾಗಿದೆ. ಈ ಮೂಲಕ ಬಿಜೆಪಿಗೆ ಮುಖಭಂಗ ಆಗಿರೋದಲ್ಲದೇ
ಡಿಸಿಎಂ ಅಶ್ವತ್ ನಾರಾಯಣ, ಮಾಜಿ ಸಚಿವ ಚಲುವರಾಯಸ್ವಾಮಿಯ ಹಿನ್ನಡೆಗೆ ಕಾರಣವಾಗಿದೆ.

ಜೆಡಿಎಸ್ ಗೆ ಅಧಿಕಾರ ತಪ್ಪಿಸಲು ಕಸರತ್ತು ನಡೆಸಿದ್ದರು ಉಭಯ ನಾಯಕರು. ಆದರೆ ಮಂಡ್ಯ ಜಿಲ್ಲಾ ಸಹಕಾರ ಹಾಲು ಒಕ್ಕೂಟ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳು ಜೆಡಿಎಸ್ ಪಾಲಾಗಿವೆ.

ಮಂಡ್ಯದ ಮನ್ಮುಲ್ ಅಧ್ಯಕ್ಷ- ಉಪಾಧ್ಯಕ್ಷ ಚುನಾವಣೆ ಫಲಿತಾಂಶ ಪ್ರಕಟಗೊಂಡಿದೆ. ಜೆಡಿಎಸ್‌ಗೆ ಅದೃಷ್ಟ ಒಲಿದಿದೆ.
ಲಾಟರಿ ಮೂಲಕ‌ ಮನ್ ಮುಲ್‌ ಗದ್ದುಗೆ ಹಿಡಿದಿದೆ ಜೆಡಿಎಸ್. ಆ ಮೂಲಕ ಬಿಜೆಪಿಯ ಅಧಿಕಾರದ ಕನಸು ನುಚ್ಚುನೂರಾಗಿದೆ.

ಚಲಾವಣೆಯಾಗಿದ್ದ 16 ಮತಗಳಲ್ಲಿ 8 - 8 ಸಮಬಲ ಮತಗಳು ಉಭಯ ಪಕ್ಷಗಳ ಪಾಲಾಗಿದ್ದವು. ಸಮಬಲ ಸಾಧಿಸಿದ್ದ ಜೆಡಿಎಸ್-ಬಿಜೆಪಿ ಅಧ್ಯಕ್ಷ ಸ್ಥಾನದ ಸ್ಪರ್ಧಿಗಳಿಗೆ ಕುತೂಹಲ ಕಾದಿತ್ತು.

ಕೊನೆಗೆ ಲಾಟರಿ ಎತ್ತವ ಮೂಲಕ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆಯಾದವು ಜೆಡಿಎಸ್‌ನ ಬಿ.ಆರ್. ರಾಮಚಂದ್ರು.

ಬಿಜೆಪಿ ಹಿನ್ನಡೆಗೆ ಅಧಿಕಾರಿಯೊಬ್ಬರ ಕ್ರಾಸ್ ಓಟಿಂಗ್ ಶಂಕೆ ವ್ಯಕ್ತವಾಗಿದೆ. ಜೆಡಿಎಸ್‌ ಬಿಟ್ಟು ಬಿಜೆಪಿ ಸೇರಿ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಎಸ್‌ ಪಿ ಸ್ವಾಮಿಗೆ ಮುಖಭಂಗವಾಗಿದೆ. ಉಪಾಧ್ಯಕ್ಷ ಸ್ಥಾನವು ಜೆಡಿಎಸ್ ಗೆ ಒಲಿದಿದೆ. 9 ಮತ ಪಡೆದು ಉಪಾಧ್ಯಕ್ಷ ಗದ್ದುಗೆ ಏರಿದ್ದಾರೆ ರಘು ನಂದನ್.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ