ಚುಂಚನಗಿರಿ ಶ್ರೀಗಳ ಫೋನ್ ಕದ್ದಾಲಿಕೆ : ಬಿಜೆಪಿ ವಿರುದ್ಧ ಜೆಡಿಎಸ್ ಗುಟುರು
ಬುಧವಾರ, 2 ಅಕ್ಟೋಬರ್ 2019 (19:56 IST)
ಚುಂಚನಗಿರಿ ಶ್ರೀಗಳ ಫೋನ್ ಕದ್ದಾಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ವಿರುದ್ಧ ಜೆಡಿಎಸ್ ತೊಡೆತಟ್ಟಿದೆ.
ಜೆಡಿಎಸ್ ಶಾಸಕ ಸುರೇಶ್ ಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಶ್ರೀಗಳ ಫೋನ್ ಕದ್ದಾಲಿಕೆಯನ್ನು ಯಾರೇ ಮಾಡಿದ್ದರೂ ಅದು ಖಂಡನೀಯ. ಮಾಜಿ ಮುಖ್ಯಮಂತ್ರಿಗಳೇ ಈ ವಿಚಾರವಾಗಿ ದಿಗ್ಬ್ರಾಂತಿಯಾಗಿದ್ದಾರೆ. ಅವರು ಸಹ ನೋವನ್ನು ವ್ಯಕ್ತಪಡಿಸಿದ್ದಾರೆ ಎಂದ್ರು.
ಈ ವಿಚಾರದಲ್ಲಿ ಸ್ವಾಮೀಜಿಯವರಿಗೆ ನೋವಾದರೂ ನಾವು ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ. ವಿರೋಧ ಪಕ್ಷದ ನಾಯಕರು ಇದರ ಅಡ್ವಾಂಟೇಜ್ ತೆಗೆದುಕೊಳ್ಳೋದಿಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದಾರೆ.
ಪ್ರಕರಣ ತನಿಖಾ ಹಂತದಲ್ಲಿದೆ. CBI ತನಿಖೆ ಮಾಡುತ್ತಿರುವುದರ ಎಲ್ಲಾ ವಿಷಯಗಳ ಕುರಿತು ಪ್ರತಿನಿತ್ಯದ ಮಾಹಿತಿಯನ್ನು ಆಡಳಿತ ಪಕ್ಷದ ನಾಯಕರು ಬಹಿರಂಗವಾಗಿ ತಿಳಿಸುತ್ತಿದ್ದಾರೆ.
ತನಿಖೆ ಮುಗಿಯುವರೆಗೂ ಗೌಪ್ಯವಾಗಿಡಬೇಕು, ಆದರೆ ತನಿಖೆ ಕುರಿತು ಆಡಳಿತ ಪಕ್ಷಕ್ಕೆ ಸಂಪೂರ್ಣ ಮಾಹಿತಿ ನೀಡುತ್ತಿದ್ದಾರೆ ಇದು ತನಿಖೆಯಾಗಲು ಹೇಗೆ ಸಾಧ್ಯ. ಈ ತನಿಖೆ ನಂಬಲು ಅರ್ಹವಾಗಿಲ್ಲ ಎಂದ್ರು.