ರಾಜ್ಯದಲ್ಲಿ ಸಂಚಲನ ಸೃಷ್ಠಿಸಿರುವ ಫೋನ್ ಟ್ಯಾಪಿಂಗ್ ಇನ್ನಷ್ಟು ಸ್ವಾಮೀಜಿಗಳನ್ನು ಸುತ್ತಿಕೊಂಡಿರುವ ಶಂಕೆ ವ್ಯಕ್ತವಾಗಿದೆ.
ಫೋನ್ ಟ್ಯಾಪಿಂಗ್ ಚಿತ್ರದುರ್ಗಕ್ಕೂ ವ್ಯಾಪಿಸಿದೆಯಾ ಅನ್ನೋ ಪಿಸು ಮಾತುಗಳು ಜಿಲ್ಲೆಯಲ್ಲಿ ಹರಿದಾಡುತ್ತಿವೆ.
ಮಾದರ ಗುರುಪೀಠದ ಮಾದರ ಚನ್ನಯ್ಯ ಸ್ವಾಮೀಜಿ ಅವರ ಫೋನ್ ನ್ನು ಕದ್ದಾಲಿಸಲಾಗಿತ್ತು ಎನ್ನೋ ಅನುಮಾನ ವ್ಯಕ್ತವಾಗತೊಡಗಿದೆ.
ಕಳೆದ ವಿಧಾನ ಸಭಾ ಮತ್ತು ಲೋಕಸಭಾ ಚುನಾವಣೆ ವೇಳೆ ಮಾದರ ಚನ್ನಯ್ಯ ಸ್ವಾಮೀಜಿ ಜಿಲ್ಲೆಯ ಬಿಜೆಪಿ ಅಭ್ಯರ್ಥಿಗಳ ಗೆಲುವಿಗೆ ಸಹಕರಿಸಿದ್ದರು ಎನ್ನಲಾಗಿದೆ.
ರಾಜ್ಯವ್ಯಾಪ್ತಿ ತಮ್ಮ ಜನಾಂಗದವರು ಬಿಜೆಪಿಗೆ ಸಹಕರಿಸುವಂತೆ ತೆರೆಮರೆಯಲ್ಲಿ ಕಲಸ ಮಾಡಿದ್ದರು. ಈ ಹಿನ್ನಲೆಯಲ್ಲಿ ಸಮ್ಮಿಶ್ರ ಸರಕಾರ, ಅವಿಶ್ವಾಸದ ಸಮಯದಲ್ಲಿ ಸ್ವಾಮೀಜಿ ಮೊಬೈಲ್ ಕರೆಗಳನ್ನು ಕದ್ದಾಲಿಸಿರೋ ಸಂಭವವಿದೆ ಎನ್ನಲಾಗುತ್ತಿದೆ. ಆದರೆ ಮಾದರ ಪೀಠದ ಚನ್ನಯ್ಯ ಸ್ವಾಮೀಜಿ ಇದುವರೆಗೂ ಪ್ರತಿಕ್ರಿಯೆ ನೀಡಿಲ್ಲ.