ಪಂಚರತ್ನ ಸಮಾವೇಶಕ್ಕೆ ಜೆಡಿಎಸ್ ಸಿದ್ದತೆ

ಶುಕ್ರವಾರ, 4 ನವೆಂಬರ್ 2022 (18:44 IST)
ಮತ್ತೊಮ್ಮೆ ಕನಸಿನ ಯೋಜನೆ ಪಂಚರತ್ನ ರಥಯಾತ್ರೆ ಸಮಾವೇಶಕ್ಕೆ ಜೆಡಿಎಸ್ ಸಿದ್ದತೆ ಮಾಡಿಕೊಂಡ ಹಿನ್ನೆಲೆ ಕುಮಾರಸ್ವಾಮಿ ಅವರು ಚಾಲನೆ ನೀಡಬೇಕಿತ್ತು. ಆದರೆ ಮಳೆಯ ಕಾರಣದಿಂದ ಕುಮಾರಸ್ವಾಮಿ ಅವರು ಸಮಾವೇಶ ಮುಂದೂಡಿದ್ದಾರೆ. ನವೆಂಬರ್ 10ರ ಬಳಿಕ ಬೃಹತ್ ಸಮಾವೇಶ ನಡೆಸಲು ಜೆಡಿಎಸ್ ನಾಯಕರು ಚಿಂತನೆ ಮಾಡಿದ್ದಾರೆ. ಸರಣಿ ಸಭೆ ನಡೆಸುತ್ತಿರುವ ಹಿನ್ನೆಲೆ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಸ್ಥಳೀಯ ನಾಯಕರು, ಕಾರ್ಯಕರ್ತರಿಗೆ ಬಸ್ ವ್ಯವಸ್ಥೆ, ಊಟದ ವ್ಯವಸ್ಥೆ ಸೇರಿದಂತೆ 
ಕಾರ್ಯಕ್ರಮದ ಸಿದ್ದತೆಗಳ ಬಗ್ಗೆ ಜೆಡಿಎಸ್ ನಾಯಕರು ಚರ್ಚೆ ಮಾಡ್ತಿದ್ದಾರೆ. ಕುಮಾರಸ್ವಾಮಿ ಅವರು ನಿರಂತರ ಕಾರ್ಯಕ್ರಮಗಳಿಂದ ಬಳಲಿದ್ದು, ಮುಂದೆ ಸರಣಿ ಪ್ರವಾಸ ಹಿನ್ನೆಲೆ ವಿಶ್ರಾಂತಿಯಲ್ಲಿದ್ದಾರೆ. ಸಮಾವೇಶದ ಸಿದ್ದತೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುತ್ತಿದ್ದಾರೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ