ಓರ್ವ ವೈದ್ಯೆ, ಮೂವರು ನರ್ಸ್ ಅಮಾನತು

ಶುಕ್ರವಾರ, 4 ನವೆಂಬರ್ 2022 (18:38 IST)
ತಾಯಿ ಹಾಗೂ ಅವಳಿ ಮಕ್ಕಳು ಸಾವನ್ನಪ್ಪಿರುವ ಘಟನೆಗೆ ಸಂಬಂಧಪಟ್ಟಂತೆ ಜಿಲ್ಲಾಸ್ಪತ್ರೆಗೆ ಆರೋಗ್ಯ ಸಚಿವ ಸುಧಾಕರ್ ಭೇಟಿ ನೀಡಿದ್ರು. ಈ ಬಗ್ಗೆ ಮಾತನಾಡಿದ ಅವರು, ಸ್ಥಳೀಯರು ನಿನ್ನೆ 10 ಗಂಟೆ ವೇಳೆಗೆ ತುಂಬು ಗರ್ಭಿಣಿ ಮಹಿಳೆಯನ್ನು ಇಬ್ಬರು ಕರೆದುಕೊಂಡು ಬಂದಿದ್ದಾರೆ. ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯನ್ನು ದಾದಿಯರು ಒಳಗಡೆ ಕರೆದುಕೊಂಡು ಹೋದ ವೀಡಿಯೋವನ್ನು ಸಿಸಿ ಕ್ಯಾಮೆರಾದಲ್ಲಿ ನೋಡಿದ್ದೇವೆ. ನಂತರ ತಾಯಿ ಕಾರ್ಡ್, ಆಧಾರ್ ಕಾರ್ಡ್ ಕೇಳಿದ್ದಾರೆ. ಅದ್ಯಾವುದೂ ಆಕೆಯ ಬಳಿ ಇರಲಿಲ್ಲ. ಆಕೆಗೆ ಮೊದಲ ಹೆರಿಗೆ ನಾರ್ಮಲ್ ಆಗಿದೆ. ಇದು ಕೂಡ ಹಾಗೇ ಆಗುತ್ತೆ ಅಂದುಕೊಂಡಿದ್ದಾರೆ. ದಾದಿಯರು ವಿಶೇಷ ಆರೈಕೆಯಲ್ಲಿ ಆ ಮಹಿಳೆಗೆ ತಕ್ಷಣ ಚಿಕಿತ್ಸೆ ಕೊಡಬಹುದಿತ್ತು. ಆದರೆ ಅದು ಆಗಿಲ್ಲ. ಮೇಲ್ನೋಟಕ್ಕೆ ಇದು ಹೆರಿಗೆ ವಾರ್ಡಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂವರು ನರ್ಸ್​​ಗಳು ಕರ್ತವ್ಯಲೋಪ ಎಸಗಿದ್ದಾರೆ ಅಂತಾ ಅನಿಸಿದೆ. ಅಲ್ಲಿ ಡ್ಯೂಟಿ ಡಾಕ್ಟರ್ ಕೂಡ ಇದ್ದರು. ಇದು ಕರ್ತವ್ಯ ನಿರ್ಲಕ್ಷ ಅಷ್ಟೇ ಅಲ್ಲಾ. ಅಮಾನುಷವಾಗಿ ನಡೆದುಕೊಂಡಿದ್ದಾರೆ. ಈ ಘಟನೆಯಿಂದ ನಾನು ದಿಗ್ಭ್ರಮೆಗೊಳಗಾಗಿದ್ದೇನೆ. ಓರ್ವ ವೈದ್ಯೆ, ಮೂವರು ನರ್ಸ್ ಗಳನ್ನ ಅಮಾನತು ಮಾಡಲಾಗಿದೆ. ನತದೃಷ್ಟ ಹೆಣ್ಣು ಮಗು ಇಂದು ನಿರ್ಗತಿಕಳಾಗಿದ್ದಾಳೆ. ಜಿಲ್ಲಾಡಳಿತದಿಂದ 18 ವರ್ಷದವರೆಗೂ ಉಚಿತ ಶಿಕ್ಷಣ, ವಸತಿ ಕಲ್ಪಿಸಲು ವ್ಯವಸ್ಥೆ ಮಾಡ್ತೇವೆ. ವೈಯಕ್ತಿಕವಾಗಿ ನಾನು ಆಕೆಯ ಅಕೌಂಟ್​​​ನಲ್ಲಿ ಎಫ್‌ಡಿ ಮಾಡಲು ಇಚ್ಚಿಸಿದ್ದೇನೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿಕೆ ನೀಡಿದ್ರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ