ಜೆಡಿಎಸ್ ಮುಖಂಡರು ರೋಹಿತ್ ಚಕ್ರತೀರ್ಥನ ಪ್ರತಿಕೃತಿ ದಹನ ಮಾಡಿ ಆಕ್ರೋಶ

ಮಂಗಳವಾರ, 31 ಮೇ 2022 (20:56 IST)
ಪಠ್ಯ ಪುಸ್ತಕ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೀತಿದೆ. ಇಂದು ಜೆಡಿಎಸ್ ಮುಖಂಡರು ಸೇರಿದಂತೆ ಅನೇಕ ಕಾರ್ಯಕರ್ತರು ಪಠ್ಯ ಪುಸ್ತಕದ ವಿರುದ್ಧ ಕಿಡಿಕಾರಿದ್ದಾರೆ.ಅಷ್ಟೆ ಅಲ್ಲದೆ ಪ್ರೀಡಂ ಪಾರ್ಕ್ ನಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ವಿದ್ಯಾರ್ಥಿ ಸಂಘಟನೆಗಳು, ಪ್ರಗತಿಪರರು, ಸಾಹಿತಿಗಳು ಪ್ರತಿಭಟನೆ ನಡೆಸಿ ಶಿಕ್ಷಣ ಸಚಿವ ನಾಗೇಶ್, ರೋಹಿತ್ ಚಕ್ರತೀರ್ಥ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಪಠ್ಯ ಪರಿಷ್ಕರಣೆ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೀತಿದೆ. ನಾಡಗೀತೆಯನ್ನ ಒಳ ಉಡುಪಿಗೆ ಹೋಲಿಸಿ ವಾಟ್ಸ್ ಆಫ್ ಪೋಸ್ಟ್ ಮಾಡಿ ಅಪಮಾನ ಮಾಡಿದ ರೋಹಿತ್ ಚಕ್ರತೀರ್ಥ ವಿರುದ್ದ ಎಲ್ಲೆಡೆ ಭಾರೀ ಅಕ್ರೋಶ ವ್ಯಕ್ತವಾಗ್ತಿದೆ.ಇಂದು ಜೆಡಿಎಸ್ ಪಕ್ಷದ ವತಿಯಿಂದ ಪಠ್ಯ ಪುಸ್ತಕ  ಪರಿಷ್ಕರಣೆ  ಮಾಡಬೇಕೆಂದು ಒತ್ತಾಯಿಸಿ ಜೆಪಿ ಭವನದಲ್ಲಿ  ಸುದ್ದಿಗೋಷ್ಟಿ ನಡೆಸಿದ್ರು. ತದನಂತರ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ಜೊತೆಗೆ ರೋಹಿತ್ ಚಕ್ರತೀರ್ಥನ ಪ್ರತಿಮೆ ಹಿಡಿದುಕೊಂಡು ಪ್ರತಿಭಟನಾ ಮೆರವಣಿಗೆ ಮಾಡಿದ್ರು. ಅಷ್ಟೆ ಅಲ್ಲದೇ ರೋಹೀತ್ ಚಕ್ರತೀರ್ಥನ್ನ ಪ್ರತಿಮೆಗೆ ಚಪ್ಪಲಿಯಲ್ಲಿ ಹೊಡೆದು , ಪ್ರತಿಕೃತಿ ದಹನ ಮಾಡಿದ್ರು. ಇನ್ನು ಪ್ರತಿಭಟನೆ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ಜೆಡಿಎಸ್ ಕಾರ್ಯಕರ್ತರನ್ನ ಪೊಲೀಸರು ಬಂಧಿಸಿದ್ರು. ಆದ್ರೆ ಇಷ್ಟಕ್ಕೆ ಸುಮ್ಮನಾಗದೇ ನಮ್ಮ ಪ್ರತಿಭಟನೆ ಇಂದಿನಿಂದ ಆರಂಭವಾಗುತ್ತೆ.ಬಂಧಿಸಿರುವ ಮುಖಂಡರನ್ನ ತಕ್ಷಣವೇ ಬಿಡುಗಡೆ ಮಾಡಬೇಕು.‌ರೋಹಿತ್ ಚಕ್ರತೀರ್ಥನ ಪರಿಷ್ಕರಣ ಸಮಿತಿಯಿಂದ ವಜಾಮಾಡಬೇಕು .ಕೂಡಲೇ ಆತನನ್ನ ಬಂಧಿಸಬೇಕು. ಬಿಸಿ ನಾಗೇಶ್ ರಾಜೀನಾಮೆ ಕೊಡಬೇಕೆಂದು ಆಗ್ರಹಿಸಿದ್ರು .

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ