ತಾಲೂಕು ಪಂಚಾಯಿತಿ ಸಭೆಯಲ್ಲಿ ತಾಲೂಕು ಪಂಚಾಯಿತಿ ಅನುದಾನದಲ್ಲಿ ಅವ್ಯವಹಾರವಾಗಿದೆ ಎಂದು ಕಾಂಗ್ರೆಸ್ ಸದಸ್ಯರು ಆರೋಪ ಮಾಡಿದ ಹಿನ್ನಲೆಯಲ್ಲಿ ತೀವ್ರ ಆಕ್ರೋಶಗೊಂಡ ಜೆಡಿಎಸ್ ಶಾಸಕ ಶಿವಲಿಂಗೇಗೌಡರು ಆಕ್ಷೇಪಾರ್ಹ ಪದ ಬಳಕೆ ಮಾಡಿದ್ದಾರೆ.
ಯಾವ ಶಾಸಕನೂ ತಾಲೂಕು ಪಂಚಾಯಿತಿ ಸಭೆಗಳಿಗೆ ಬರಲ್ಲ. ನಾನು ನಿಮ್ಮ ಅನುಕೂಲಕ್ಕಾಗಿ ಸಭೆಗೆ ಬಂದ್ರೆ ನನ್ನನ್ನೇ ಪ್ರಶ್ನಿಸ್ತೀರಿಎಂದು ಹೇಳಿ ಆ ವೇಳೆ ಆಕ್ರೋಶಗೊಂಡು ಆಕ್ಷೇಪಾರ್ಹ ಪದ ಬಳಕೆ ಮಾಡಿ ಶಿವಲಿಂಗೇಗೌಡರು ಸಭೆಯಿಂದ ಹೊರ ನಡೆದಿದ್ದಾರೆ ಎನ್ನಲಾಗಿದೆ.