ಶಾಸಕರ ಮೇಲೆ ನಿಗಾ ಇಡಲು ಜೆಡಿಎಸ್ ಪ್ಲ್ಯಾನ್
ಜೆಡಿಎಸ್ ತನ್ನ ಶಾಸಕರ ರಕ್ಷಣೆಗೆ ಹೊಸ ಚಿಂತನೆ ನಡೆಸಿದ್ದು, ತಮ್ಮ ಶಾಸಕರನ್ನ ಹಿಡಿದಿಟ್ಟುಕೊಳ್ಳಲು "ಸೀಕ್ರೆಟ್ ಸೆಲ್" ರಚನೆಗೆ ತೀರ್ಮಾನ ಮಾಡಿದೆ. ದೇಶದಲ್ಲಿ ಇದೇ ಮೊದಲ ಬಾರಿಗೆ ಜೆಡಿಎಸ್ ಶಾಸಕರ ರಕ್ಷಣೆಗೆ ಹೊಸ ಐಡಿಯಾ ಮಾಡಿದೆ. ಆಪರೇಷನ್ ಕಮಲ, ಆಪರೇಷನ್ ಹಸ್ತಗಳನ್ನ ತಡೆಯಲು ಜೆಡಿಎಸ್ ಹೊಸ ಚಿಂತನೆ ನಡೆಸಿದ್ದು, ಹೊಸ ಶಾಸಕರ ಮೇಲೆ ನಿಗಾ ಇಡಲು ಸೆಲ್ ಸೀಕ್ರೆಟ್ ರಚಿಸಲು ತೀರ್ಮಾನ ಮಾಡಿದೆ. ವಾರ್ ರೂಮ್ನಲ್ಲಿ ನಿಗಾ ಘಟಕ ಸ್ಥಾಪಿಸಿ, ಶಾಸಕರ ಮೇಲೆ ತಂಡವೊಂದು ನಿಗಾ ಇಡಲಿದೆ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಜಮೀರ್ ಮತ್ತು ಚಲುವರಾಯಸ್ವಾಮಿ ತಂಡ ಕಾಂಗ್ರೆಸ್ ಸೇರ್ಪಡೆಯಾಗಿತ್ತು. ಜೊತೆಗೆ ಮೈತ್ರಿ ಸರ್ಕಾರದಲ್ಲಿದ್ದ ಹೆಚ್.ವಿಶ್ವನಾಥ್, ಕೆ.ಸಿ.ನಾರಾಯಣಗೌಡ ಸೇರಿದಂತೆ ಶಾಸಕರು ಬಿಜೆಪಿ ಕೈ ಹಿಡಿದಿದ್ದರು. ಇದರಿಂದ ಪಾಠ ಕಲಿತಿರುವ ಜೆಡಿಎಸ್ ವರಿಷ್ಠರು, ಮುಂದೆ ಶಾಸಕರು ಕೈ ತಪ್ಪಿ ಹೋಗದಂತೆ ತಡೆಯಲು ಈರೀತಿ ಚಿಂತನೆ ನಡೆಸಿದ್ದಾರೆ.