ಮುಂದಿನ ತಿಂಗಳು ಅಕ್ಕಿ ನೀಡುತ್ತೇವೆ-ಸತೀಶ್ ಜಾರಕಿಹೊಳಿ
ಜುಲೈ 1ರಿಂದ ಅಕ್ಕಿ ನೀಡುವ ವಿಚಾರವಾಗಿ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯಿಸಿದ್ರು. ತುಮಕೂರಿನಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳು ಅಕ್ಕಿ ನೀಡುತ್ತೇವೆ ಏನೂ ತೊಂದರೆ ಇಲ್ವಲ್ಲ. ಈ ತಿಂಗಳು ಆಗಲಿಲ್ಲಅಂದ್ರೆ ಮುಂದಿನ ತಿಂಗಳು ಕೊಡುತ್ತೇವೆ. ತಡ ಆಗಬಹುದು, 5KG ಈಗಾಗಲೇ ಇದ್ಯಲ್ಲ. ಎಲ್ಲಾ ರಾಜ್ಯದಿಂದ ಹಾಗೂ ಕೇಂದ್ರದ ಸ್ವಾಮ್ಯಗಳಿಂದ ಅಕ್ಕಿ ತರಲು ಪ್ರಯತ್ನ ನಡೆಯುತ್ತಿದೆ. ತಡ ಆಗಬಹುದು ಎಂದ್ರು..ಇನ್ನು ಮಾಜಿ ಸಿಎಂ ಯಡಿಯೂರಪ್ಪ ಹೋರಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೊರಗಡೆ ಹೋರಾಟ ಮಾಡಲು ಎಲ್ಲರಿಗೂ ಅವಕಾಶ ಇದೆ ಮಾಡಲಿ. ನಮಗೂ ಜವಾಬ್ದಾರಿ ಇದೆ ಎಂದ್ರು.