ಜೆಡಿಎಸ್ ವರಿಷ್ಠರಿಗೆ ನಾಯಕರನ್ನು ಸೃಷ್ಟಿಸುವ ತಾಕತ್ತಿದೆ: ಜೆಡಿಎಸ್ ಶಾಸಕ

ಶುಕ್ರವಾರ, 17 ಜೂನ್ 2016 (19:52 IST)
ಜೆಡಿಎಸ್ ಪಕ್ಷದ ವರಿಷ್ಠರಿಗೆ ನಾಯಕರನ್ನು ಸೃಷ್ಟಿಸುವ ತಾಕತ್ತಿದೆ.ಎಷ್ಟೇ ಶಾಸಕರು ಜೆಡಿಎಸ್ ತೊರೆದರೂ ವರಿಷ್ಠರು ಹೆದರೊಲ್ಲ ಎಂದು ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ಹೇಳಿದ್ದಾರೆ.
 
ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಐವರು ಪ್ರಭಾವಿ ಸಚಿವರಿದ್ದರೂ ಜೆಡಿಎಸ್ ಅಭ್ಯರ್ಥಿ ಶ್ರೀಕಂಠೇಗೌಡ ಜಯಗಳಿಸಿದ್ದಾರೆ. ಜೆಡಿಎಸ್ ಜನರ ಪಕ್ಷ ಎನ್ನುವುದಕ್ಕೆ ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶವೇ ಸಾಕ್ಷಿಯಾಗಿದೆ ಎಂದರು.
 
ದಕ್ಷಿಣ ಪದವೀಧರ ಕ್ಷೇತ್ರದ ಫಲಿತಾಂಶ ಭಿನ್ನಮತ ನಡೆಸುವ ಶಾಸಕರಿಗೂ ಫಲಿತಾಂಶ ತಕ್ಕ ಉತ್ತರವಾಗಿದೆ. ಜೆಡಿಎಸ್ ವರಿಷ್ಠರಿಗೆ ನೂರಾರು ಶಾಸಕರನ್ನು ಗೆಲ್ಲಿಸುವ ಸಾಮರ್ಥವಿದೆ. ಯಾರೇ ಜೆಡಿಎಸ್ ತೊರೆದರೂ ಪಕ್ಷದ ನಾಯಕರು ಹೆದರೋಲ್ಲ ಎಂದು ಭಿನ್ನಮತೀಯ ಶಾಸಕರಿಗೆ ತಿರುಗೇಟು ನೀಡಿದ್ದಾರೆ.
 
 ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ನಿಂದ ಅಮಾನತ್ತುಗೊಂಡ ಶಾಸಕ ಚಲುವರಾಯ ಸ್ವಾಮಿ ಸೇರಿದಂತೆ ಇತರ ಏಳು ಮಂದಿ ಶಾಸಕರು ಜೆಡಿಎಸ್ ಅಭ್ಯರ್ಥಿಗೆ ಮತಹಾಕದಂತೆ ಕರೆ ನೀಡಿದ್ದರು. ಆದರೆ, ಅವರ ಕರೆಗೆ ಮೂರು ಕಾಸಿನ ಬೆಲೆ ನೀಡದ ಮತದಾರರು ಜೆಡಿಎಸ್ ಅಭ್ಯರ್ಥಿ ಶ್ರೀಕಂಠೇಗೌಡರನ್ನು ಗೆಲ್ಲಿಸಿದ್ದಾರೆ ಎಂದು ಬಂಡಾಯ ಶಾಸಕರ ವಿರುದ್ಧ ಜೆಡಿಎಸ್ ಶಾಸಕ ಸಾ.ರಾ.ಮಹೇಶ್ ವ್ಯಂಗ್ಯವಾಡಿದರು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ