ಜೆಸ್ಕಾಂ ಅಧಿಕಾರಿ ಮೇಲೆ ಹಲ್ಲೆ ಕೇಸ್: ಶಾಸಕ ತಿಪ್ಪರಾಜ್ ಹವಾಲ್ದಾರ್ ಜಾಮೀನು ಅರ್ಜಿ ವಜಾ

ಭಾನುವಾರ, 25 ಸೆಪ್ಟಂಬರ್ 2016 (11:54 IST)
ಜೆಸ್ಕಾಂ ಅಧಿಕಾರಿ ಹಾಗೂ ಸಿಬ್ಬಂದಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಗ್ರಾಮೀಣ ಶಾಸಕ ತಿಪ್ಪರಾಜ್ ಹವಾಲ್ದಾರ್ ಸೇರಿದಂತೆ ಎಂಟು ಜನರು ಸಲ್ಲಿಸಿದ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಎರಡನೇಯ ಹೆಚ್ಚವರಿ ನ್ಯಾಯಾಲಯ ವಜಾಗೊಳಿಸಿದೆ.
 
ರಾಯಚೂರು ಜಿಲ್ಲೆಯ ಚಂದ್ರಬಂಡಾ ಗ್ರಾಮದಲ್ಲಿ ಶಾಸಕ ತಿಪ್ಪರಾಜ್ ಸೇರಿದಂತೆ ಎಂಟು ಜನರು ನಮ್ಮ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿ ಜೆಸ್ಕಾಂ ಸಿಬ್ಬಂದಿ ಯಾಪಲದಿನ್ನಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. 
 
ಈ ಕುರಿತು ಸೆಪ್ಟೆಂಬರ್ 20 ರಂದು ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನಿಗೆ ಶಾಸಕ ತಿಪ್ಪರಾಜ್ ಹವಾಲ್ದಾರ್ ಹಾಗೂ ಉಳಿದ ಆರೋಪಿಗಳು ಅರ್ಜಿ ಸಲ್ಲಿಸಿದ್ದರು. ಸೆಪ್ಟೆಂಬರ್ 23 ರಂದು ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ