ಕೇರಳ ರೈಲಿಗೆ ಬೆಂಕಿ ಹಚ್ಚಿದ ಜಿಹಾದಿ ಆರೋಪಿ ಬಂಧನ
ಕೇರಳದ ರೈಲಿಗೆ ಬೆಂಕಿ ಹಚ್ಚಿದ ಘಟನೆಯು ಜಿಹಾದಿ ಭಯೋತ್ಪಾದಕ ಕೃತ್ಯವಾಗಿದೆ ಎಂದು NIA ಹೇಳಿಕೆಯಲ್ಲಿ ತಿಳಿಸಿದೆ. ಈ ಪ್ರಕರಣದ ಏಕೈಕ ಆರೋಪಿ, ಸ್ವಯಂ ಉಗ್ರಗಾಮಿ ಶಾಹೀನ್ ಬಾಗ್ ನಿವಾಸಿಯಾಗಿದ್ದಾನೆ. ಈತ ಜನರನ್ನು ಕೊಲ್ಲುವ ಉದ್ದೇಶದಿಂದ ಅಲಪ್ಪುಳ-ಕಣ್ಣೂರು ಎಕ್ಸಿಕ್ಯೂಟಿವ್ ಎಕ್ಸ್‌ಪ್ರೆಸ್‌ನ ಬೋಗಿಗೆ ಬೆಂಕಿ ಹಚ್ಚಿದ್ದಾನೆ ಎಂದು ಎನ್‌ಐಎ ಆರೋಪಪಟ್ಟಿಯಲ್ಲಿ ತಿಳಿಸಿದೆ.ರೈಲಿನಲ್ಲಿ ಮಗು ಸೇರಿದಂತೆ ಮೂವರು ಪ್ರಯಾಣಿಕರು ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿದ್ದರು. ಈ ಸಂಬಂಧ ಆರೋಪಿ ಶಾರುಖ್ ಅಲಿಯಾಸ್ ಶಾರುಖ್ ಸೈಫಿ ವಿರುದ್ಧ ಐಪಿಸಿ, ಯುಎ (ಪಿ) ಎ ಆಕ್ಟ್, ರೈಲ್ವೇಸ್ ಆಕ್ಟ್ ಮತ್ತು ಪಿಡಿಪಿಪಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಆರೋಪ ಹೊರಿಸಲಾಗಿದೆ.