ಜೆಡಿಎಸ್ ಪಕ್ಷ ಸೇರ್ಪಡೆ

ಗುರುವಾರ, 30 ಮಾರ್ಚ್ 2023 (19:07 IST)
ಚುನಾವಣೆ ಸಮೀಪಿಸುತ್ತಿದ್ದಂತೆ ಪಕ್ಷದಿಂದ ಪಕ್ಷಕ್ಕೆ ಹಾರೊದು ಕಾಮನ್ ಆಗಿದೆ. ಬಳ್ಳಾರಿ ಯ ಕಂಪ್ಲಿ ಕ್ಷೇತ್ರದ ಶಾಸಕ ರಾಜು ನಾಯಕ್. ರಾಜು ವೆಂಕಟಪ್ಪ , ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು ಇಂದು ಜನತಾದಳದ ಕೇಂದ್ರ ಕಚೇರಿಯ ಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು. ದೇವರಗೌಡರು ರಾಜ್ಯಕ್ಕೆ, ರೈತರಿಗೆ ನೀಡಿರುವ ಕೊಡುಗೆಗಳನ್ನ ಮನಗಂಡು ಇಂದು ಅನೇಕರು ಪಕ್ಷಕ್ಕೆ ಸೇರ್ಪಡೆಯಾದರು. ಮಾಜಿ ಸಿಎಂ ಕುಮಾರಸ್ವಾನಿ, ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸಮ್ಮುಖದಲ್ಲಿ ನೂರಾರು ಕಾರ್ಯಕರ್ತರು ಸೇರ್ಪಡೆಯಾದರು.
 
ನಂತರ ಮಾತನಾಡಿದ ಕುಮಾರಸ್ವಾಮಿ ಈ ಬಾರಿ ಸರಳ‌ಬಹುಮತದಿಂದ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ನಮ್ಮ ಪಕ್ಷ  ಒಳ ಒಪ್ಪಂದ ಮಾಡಿಕೊಂಡಿದ್ದಾರೆಂದು ಸುಮ್ಮನೆ ಮಾತನಾಡುತ್ತಾರೆ. ಅವರಿಗೆ ಜೆಡಿಎಸ್ ಬಗ್ಗೆ ಮಾತನಾಡಲು ಏನು ಸಬ್ಜೆಟ್ ಇಲ್ಲ ಬೇಕಾದ್ರೆ ನಾನು ಕೊಡುತ್ತೇನೆ ಅಲ್ದೆ ರಾಷ್ಟ್ರೀಯ ಪಕ್ಷದ ನಾಯಕರು ನಮ್ಮ ಮನೆ ಬಾಗಿಲಿಗೆ ಬಂದು ಕದ ತಟ್ಟುತ್ತಿದ್ದಾರೆ. ನೂರಕ್ಕೆ ನೂರರಷ್ಟು ನಾವು 123 ಸೀಟ್ ಗೆಲ್ಲುತ್ತೇವೆ ಇದು ಕೆಲವರಿಗೆ ಹಾಸ್ಯ ಅನ್ನಿಸಬಹುದು ಆದ್ರೆ ಈ ಬಾರಿ ನಾವು ಅಧಿಕಾರಕ್ಕೆ ಬಂದೆ ಬರ್ತೇವೆ ಅನ್ನೋ ವಿಶ್ವಾಸ  ವ್ಯಕ್ತಪಡಿಸಿದರು. ಅಲ್ಲದೆ ಗುಬ್ಬಿ ಶಾಸಕ ಶ್ರೀನಿವಾಸ್ ಕಾಂಗ್ರೆಸ್ ಸೇರ್ಪಡೆ ಯಾಗಿರೋ ಬಗ್ಗೆ ಪ್ರತಿಕ್ರಿಯಿಸಿ ಅವರಿಗೆ ಮಂತ್ರಿ ಮಾಡಿದ್ದೆ ಕಿರಿಕಿರಿಯಾಯಿತು . ಇನ್ನೂ ಈಗ ಸಿದ್ದರಾಮಯ್ಯ ಮುಸ್ಲಿಂ ರನ್ನ ಹೊಲೈಕೆ ಮಾಡೋಕ್ಕೆ ಮುಂದಾಗಿದ್ದಾರೆ. ಇಕ್ಬಾಲ್ ಅನ್ಸಾರಿ ಅವರನ್ನ ಮಂತ್ರಿ ಮಾಡಿದಕ್ಕೆ ಸಹಿಸಿಕೊಂಡಿಲ್ಲ, ಎಂಟು ಜನ ಶಾಸಕರನ್ನ ಕರೆದುಕೊಂಡು ಹೋಗಿದ್ದು ಗೊತ್ತಿದೆ ಅವರ ಈ ಮಾತು ಏಯ್ತ್ ವಂಡರ್ಸ್ ಆಪ್ ಧಿ ವಲ್ಡ್ ಎಂದು ವ್ಯಂಗ್ಯಮಾಡಿದ್ರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ