ಬಿಜೆಪಿ ಗೆಲುವಿಗೆ ಪಣ ತೊಡುವಂತೆ ಜೆ.ಪಿ.ನಡ್ಡಾ ಕರೆ

ಮಂಗಳವಾರ, 21 ಫೆಬ್ರವರಿ 2023 (07:39 IST)
ಚಿಕ್ಕಮಗಳೂರು : ಬಿಜೆಪಿ ರಾಜ್ಯ ಸರ್ಕಾರವು ಸಬ್ ಕಾ ಸಾಥ್.. ಸಬ್ ಕಾ ವಿಕಾಸ್ ದೃಷ್ಟಿಕೋನದಿಂದ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ತಿಳಿಸಿದರು.
 
ಮೋದಿಜಿ ಅವರ 9 ವರ್ಷದ ಆಡಳಿತ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಅವರ ಸರ್ಕಾರದ ಮೂಲಕ ರಾಜ್ಯದ ಎಲ್ಲ ವರ್ಗದ ಜನತೆಯ ಸಶಕ್ತೀಕರಣ ಕಾರ್ಯ ನಡೆದಿದೆ. ಹಾಗಾಗಿ ಡಬಲ್ ಎಂಜಿನ್ ಸರ್ಕಾರದ ಸಾಧನೆಯನ್ನು ಜನರಿಗೆ ತಿಳಿಸಬೇಕು ಎಂದರು.

ಕೋವಿಡ್ ಸಂದರ್ಭದಲ್ಲಿ ಮೋದಿಜಿ ಅವರ ನೇತೃತ್ವದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆಯಿಂದ 80 ಕೋಟಿ ಜನರು ಪ್ರಯೋಜನ ಪಡೆದರು. ಜನರು ಹಸಿವಿನಿಂದ ಸಾಯುವುದು ತಪ್ಪಿತು. ಆದರೆ ಪ್ಲೇಗ್ನಿಂದ ಬಹಳಷ್ಟು ಜನರು ಸತ್ತಿದ್ದರು ಎಂದು ನೆನಪಿಸಿದರು. 

ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 3.50 ಕೋಟಿ ಮನೆ ನಿರ್ಮಿಸಲಾಗಿದೆ. ಹಿಂದೆ ನಾನು ಶಾಸಕನಾಗಿದ್ದಾಗ 2 ಪಂಚಾಯಿತಿಗೆ ಒಂದು ಇಂದಿರಾ ಆವಾಸ್ ಮನೆ ನೀಡುತ್ತಿದ್ದರು. ಆದ್ರೆ ಬಿಜೆಪಿ ಸರ್ಕಾರದಿಂದ ಕರ್ನಾಟಕದಲ್ಲಿ 9 ಲಕ್ಷ ಮನೆಗಳನ್ನ ನಿರ್ಮಿಸಲಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ