ಭಾರಿ ಮಳೆಗೆ ಹಾರಿದ ತಗಡು; ಕುಸಿದ ಮನೆ

ಶುಕ್ರವಾರ, 24 ಮೇ 2019 (15:02 IST)
ಭಾರೀ ಮಳೆ ಗಾಳಿಗೆ ಮನೆಯ ಮೇಲೆ ಹಾಕಲಾಗಿದ್ದ ತಗಡುಗಳು ಹಾರಿ ಹೋಗಿವೆ.

ಈ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಚಿಕ್ಕನರ್ತಿ, ಹಿರೇನರ್ತಿ  ಗ್ರಾಮಗಳಲ್ಲಿ ನಡೆದಿವೆ.
ರಾತ್ರಿ ಭಾರಿ ಮಳೆಯ ಜೊತೆಗೆ ಬಿರುಗಾಳಿ ಬೀಸಿ ಮನೆಯ ಮೇಲೆ ಹಾಕಲಾಗಿದ್ದ ತಗಡುಗಳು ಹಾರಿ ಹೋಗಿವೆ.‌ 

ಅಲ್ಲಾಸಾಬ್ ಲ‌ ನದಾಫ್, ಹುಸೇನ್ ಸಾಬ್ ನದಾಫ್, ಕಲ್ಲಪ್ಪ ಶಾನವಾಡ ಎಂಬುವವರ ಮನೆಯ ತಗಡುಗಳು ಸೇರಿದಂತೆ ಗ್ರಾಮದ ಹತ್ತಕ್ಕೂ ಹೆಚ್ಚು ಮನೆಯ ತಗಡುಗಳು ಹಾಗೂ ಶೆಡ್ಡುಗಳು ಗಾಳಿಯ ಹೊಡೆತಕ್ಕೆ ಹಾರಿ ಹೋಗಿವೆ.

ಕಳೆದ ತಿಂಗಳು ಗಾಳಿಗೆ ತಗಡುಗಳು ಹಾರಿ ಹೋಗಿದ್ದವು.‌ ಒಂದು ವಾರದ ಹಿಂದಕ್ಕೆ ಹೊಸ ತಗಡುಗಳನ್ನು ಹಾಕಲಾಗಿತ್ತು.‌ ಈಗ ಮತ್ತೆ ಗಾಳಿಯ ಹೊಡೆತಕ್ಕೆ ತಗಡುಗಳು ಹಾರಿ ಹೋಗಿವೆ ಎಂದು ತಮ್ಮ ಅಳಲು ತೊಡಿಕೊಂಡಿದ್ದಾರೆ.  ಕೂಡಲೇ ತಾಲೂಕಾಡಳಿತ ಪರಿಹಾರ‌ ನೀಡಬೇಕು ಎಂದು ಒತ್ತಾಯಿಸಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ