ಮಹಾದಾಯಿ ವಿವಾದದಲ್ಲೂ ರಾಜ್ಯಕ್ಕೆ ನ್ಯಾಯ– ಸಿದ್ದರಾಮಯ್ಯ ವಿಶ್ವಾಸ

ಗುರುವಾರ, 22 ಫೆಬ್ರವರಿ 2018 (17:47 IST)
ಕಾವೇರಿ ತೀರ್ಪು ನೀಡಿರುವ ಸುಪ್ರೀಂಕೋರ್ಟ್ ನದಿಯ ನೀರು ಯಾವ ರಾಜ್ಯದ ಸ್ವತ್ತೂ ಅಲ್ಲ ಎಂದಿದೆ, ಆದ್ದರಿಂದ ಮಹಾದಾಯಿ ವಿವಾದದಲ್ಲೂ ಕರ್ನಾಟಕಕ್ಕೆ ನ್ಯಾಯ ಸಿಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 
 
ವಿಧಾನಸಭೆಯಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಅಭಿಪ್ರಾಯದ ಪ್ರಕಾರ ಮಹಾದಾಯಿ ನೀರು ನಮ್ಮದು ಎಂದು ಗೋವಾದವರು ವಾದಿಸಲು ಆಗುವುದಿಲ್ಲ. ಹೀಗಾಗಿ ಕರ್ನಾಟಕಕ್ಕೆ ತನ್ನ ಪಾಲಿನ ನೀರು ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದ್ದಾರೆ.
 
ಕಾವೇರಿ ತೀರ್ಪಿನಿಂದ ಆ ಭಾಗದ ಜನ ನಿಟ್ಟುಸಿರು ಬಿಡುವಂತಾಗಿದೆ.  ಸರ್ಕಾರದ ವಾದವನ್ನು ಸಂಪೂರ್ಣವಾಗಿ ಒಪ್ಪದಿದ್ದರೂ ಭಾಗಶಃ ವಾದವನ್ನು ಒಪ್ಪಿದೆ. ಈ ತೀರ್ಪನ್ನು ಸ್ವಾಗತಿಸುತ್ತೇನೆ. ಸಮರ್ಥ ವಾದ ಮಂಡಿಸಿದ ವಕೀಲರ ತಂಡವನ್ನು ಅಭಿನಂದಿಸುತ್ತೇನೆ ಎಂದಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ