ನಾಳೆ ಕರ್ನಾಟಕ ಬಂದ್: ಏನಿರುತ್ತೆ..? ಏನಿರುವುದಿಲ್ಲ..?

ಭಾನುವಾರ, 11 ಜೂನ್ 2017 (11:24 IST)
ಬಯಲುಸೀಮೆಗೆ ಶಾಶ್ವತ ನೀರಾವರಿ ಮತ್ತು ರೈತರ ಸಾಲಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿ. ಸಿ ಕನ್ನಡಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್`ಗೆ ಕರೆ ನೀಡಿವೆ. ವಾಟಾಳ್ ನಾಗರಾಜ್ ಕರೆ ನೀಡಿರುವ ಬಂದ್`ಗೆ ಕೆಲ ಸಂಘಟನೆಗಳು ಬೆಂಬಲ ನೀಡಿವೆ. ಕೆಎಸ್ಆರ್ಟಿಸಿ ನೌಕರರ ಸಂಘ ಸಹ ಬೆಂಬಲ ಸೂಚಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಫಿಲ್ಮ್ ಚೇಂಬರ್ ಅಧ್ಯಕ್ಷ ಸಾ.ರಾ. ಗೋವಿಂದು ಬೆಂಬಲ ಸೂಚಿಸಿದ್ದಾರೆ.

ನಾಳೆ ಟೌನ್`ಹಾಲ್`ನಿಂದ ವಿಧಾನಸೌಧದವರೆಗೆ ಮೆರವಣಿಗೆ ಮೂಲಕ ಬಂದ ವಿಧಾನಸೌಧಕ್ಕೆ ಮುತ್ತಿಗೆ ಹಾಕುವ ಯೋಜನೆಯನ್ನ ಸಂಘಟನೆಗಳು ರೂಪಿಸಿವೆ. ಅಧಿವೇಶನ ಇರುವ ಹಿನ್ನೆಲೆಯಲ್ಲಿ ಕಾರ್ಪೊರೇಶನ್ ಬಳಿಯೇ ಹೋರಾಟಗಾರರನ್ನ ತಡೆಯುವ ಸಾಧ್ಯತೆ ಇದೆ.

-ಎಂದಿನಂತೆ ಹಾಲು, ಪೇಪರ್, ಮೆಡಿಕಲ್ ಸ್ಟೋರ್`ಗಳು ತೆರೆದಿರುತ್ತವೆ
-ಬಿಎಂಟಿಸಿ ಬಸ್ ಸಂಚಾರ ಇರಲಿದೆ ಎಂದು ಸಂಸ್ಥೆ ತಿಳಿಸಿದೆ.
-ಆಟೋ, ಖಾಸಗಿ ಬಸ್ ಸಂಚಾರಕ್ಕೆ ಅಡ್ಡಿ ಇಲ್ಲ
-ಮೆಟ್ರೋ ಸಂಚಾರವೂ ತಡೆ ಇಲ್ಲದೆ ನಡೆಯಲಿದೆ
-ಖಾಸಗಿ ಶಾಲಾ ಕಾಲೇಜುಗಳಿಗೆ ಅಧಿಕೃತವಾಗಿ ರಜೆ ಘೋಷಿಸಿಲ್ಲ
- ಕರವೇ ನಾರಾಯಣಗೌಡರ ಬಣ ಬೆಂಬಲ ಸೂಚಿಲ್ಲ
-ಓಲಾ, ಊಬರ್ ಕ್ಯಾಬ್ ಸೇವೆಗಳೂ ಲಭ್ಯವಾಗಲಿವೆ
-ಹೋಟೆಲ್, ಸರ್ಕಾರಿ ಕಚೇರಿ, ಆಸ್ಪತ್ರೆಗಳು ತೆರೆದಿರಲಿವೆ.

ಉಳಿದಂತೆ ಬಂದಸ್ ಯಾವ ರೀತಿ ನಡೆಯುತ್ತಿದೆ ಎನ್ನುವುದರ ಮೇಲೆ ಸರಕು-ಸೇವೆಗಳ ಲಭ್ಯತೆಯ ಪ್ರಶ್ನೆ ಏಳಲಿದೆ. ನಾಳೆ ಅತ್ಯಂತ ಪ್ರಮುಖ ಕೆಲಸಗಳಿದ್ದರೆ ಅವುಗಳನ್ನ ಮುಂದೂಡುವುದು ಉತ್ತಮ.

 ವೆಬ್ ದುನಿಯಾ ಫ್ಯಾಂಟಸಿ ಕ್ರಿಕೆಟ್ ಲೀಗ್: ಆಡಿ 2.5 ಲಕ್ಷ ರೂ. ಮೌಲ್ಯದ ಬಹುಮಾನ ಗೆಲ್ಲಿ.. ವೆಬ್ ದುನಿಯಾ ಫ್ಯಾಂಟಸಿ ಲೀಗ್`ನಲ್ಲಿ ಭಾಗವಹಿಸಲು ಲಿಂಕ್ ಕ್ಲಿಕ್ ಮಾಡಿ..

http://kannada.
fantasycricket.webdunia.com/

ವೆಬ್ದುನಿಯಾವನ್ನು ಓದಿ