ಜಿಮ್ ಮಾಡುವವರು ಡಾ ಸಿಎನ್ ಮಂಜುನಾಥ್ ಅವರ ಈ ಸಲಹೆಯನ್ನು ತಪ್ಪದೇ ಗಮನಿಸಿ

Krishnaveni K

ಬುಧವಾರ, 9 ಜುಲೈ 2025 (09:06 IST)
ಬೆಂಗಳೂರು: ಇತ್ತೀಚೆಗಿನ ದಿನಗಳಲ್ಲಿ ಹೃದಯಾಘಾತ ಹೆಚ್ಚಳವಾಗುವುದಕ್ಕೆ ಅತಿಯಾದ ವರ್ಕೌಟ್ ಕೂಡಾ ಕಾರಣ ಎನ್ನಲಾಗುತ್ತಿದೆ. ಹೀಗಾಗಿ ಜಿಮ್ ಮಾಡುವವರು ಹೃದ್ರೋಗ ತಜ್ಞ ಡಾ ಸಿಎನ್ ಮಂಜುನಾಥ್ ಅವರ ಈ ಸಲಹೆಯನ್ನು ಗಮನಿಸಿ.

ಸಂದರ್ಶನವೊಂದರಲ್ಲಿ ಡಾ ಸಿಎನ್ ಮಂಜುನಾಥ್ ಜಿಮ್ ಮಾಡುವವರಿಗೆ ಅತ್ಯಮೂಲ್ಯ ಸಲಹೆ ನೀಡಿದ್ದಾರೆ. ಹೃದಯಾಘಾತ ತಡೆಯಬೇಕು ಮತ್ತು ಹೃದಯ ಸಂಬಂಧೀ ಖಾಯಿಲೆಗಳನ್ನು ಬಾರದಂತೆ ನೋಡಿಕೊಳ್ಳಬೇಕು ಎಂದರೆ ಜಿಮ್ ಮಾಡುವವರು ಕೆಲವು ವಿಚಾರಗಳನ್ನು ತಪ್ಪದೇ ಗಮನಿಸಬೇಕು.

ಜಿಮ್ ಮಾಡುವುದು ತಪ್ಪು ಎಂದು ಯಾರೂ ಹೇಳಲ್ಲ. ಆದರೆ ನಾವು ಯಾವ ರೀತಿ ವರ್ಕೌಟ್ ಮಾಡಬೇಕು ಎಂಬುದನ್ನು ಗಮನಿಸಬೇಕು. ಜಿಮ್ ಗೆ ಹೋಗುವ ಮೊದಲು ಏನಾದರೂ ಅನುಮಾನಗಳಿದ್ದರೆ ನಿಮ್ಮ ಹೃದಯದ ಆರೋಗ್ಯ ತಪಾಸಣೆ ನಡೆಸಬಹುದು.

ವೈಟ್ ಲಿಫ್ಟರ್ ಗಳು 150 ಕೆ.ಜಿ., 200 ಕೆ.ಜಿ. ಭಾರ ಎತ್ತುವುದನ್ನು ನೋಡಿರಬಹುದು. ಇದೆಲ್ಲವೂ ಒಂದೇ ದಿನದಲ್ಲಿ ಆಗುವ ಕೆಲಸವಲ್ಲ. ಅವರು ಹಂತ ಹಂತವಾಗಿ ತರಬೇತಿ ಪಡೆದು ಆ ರೀತಿ ಭಾರ ಎತ್ತುತ್ತಾರೆ. ಹೀಗಾಗಿ ನಾವು ಜಿಮ್ ಮಾಡಲು ಆರಂಭಿಸಿದ ದಿನವೇ ಅತಿಯಾದ ಭಾರ ಎತ್ತುವುದು, ವರ್ಕೌಟ್ ಮಾಡುವುದು ಮಾಡಲು ಹೋದರೆ ಅದು ಹೃದಯದ ಮೇಲೆ ಪರಿಣಾಮ ಬೀರಬಹುದು. ಹಂತ ಹಂತವಾಗಿ ಸರಿಯಾದ ಸಲಹೆ ಪಡೆದುಕೊಂಡು ವರ್ಕೌಟ್ ಮಾಡಬೇಕು. ವರ್ಕೌಟ್ ಮಾಡುವುದು ಹೃದಯಕ್ಕೆ ಒಳ್ಳೆಯದು. ಆದರೆ ಅತಿಯಾಗಿ ಮತ್ತು ಒಮ್ಮೆಲೇ ಅತಿಯಾದ ವರ್ಕೌಟ್ ಮಾಡುವುದು ಹೃದಯಕ್ಕೆ ಭಾರವಾಗಬಹುದು ಎಂಬುದು ಡಾ ಸಿಎನ್ ಮಂಜುನಾಥ್ ಅವರ ಅಭಿಪ್ರಾಯವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ