ಖರ್ಗೆ ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕನ್ನಯ್ಯ ಕಿಡಿಕಾರಿದ್ದಾರೆ.
ಜೆಎನ್ ಯು ವಿದ್ಯಾರ್ಥಿ ನಜೀಬ್ ಕಾಣೆಯಾಗಿ ಹಲವು ತಿಂಗಳುಗಳೇ ಕಳೆದಿವೆ. ಆದರೆ ಆತನನ್ನು ಹುಡುಕುವುದಕ್ಕೆ ತೋರದ ಉತ್ಸಾಹವನ್ನು ಪ್ರಧಾನಿಯವರ ಸಂಬಂಧಿಯ ಮಗಳ ಪರ್ಸ್ ಹುಡುಕೋಕೆ ತೋರಲಾಗಿದೆ.
ಮೋದಿ ಸಹೋದರನ ಮಗಳ ಪರ್ಸ್, ಮೊಬೈಲ್ ಗಳಿಗೆ ಇರೋ ಬೆಲೆಯು ವಿದ್ಯಾರ್ಥಿಗಳ ಜೀವಕ್ಕೆ ಇಲ್ಲವೇ ಎಂಬುದು ಪ್ರಶ್ನೆಯಾಗಿದೆ ಅಂತ ಕನ್ನಯ್ಯ ಕೇಳಿದ್ದಾರೆ.
ಸಿಬಿಐ ತನಿಖೆಗೆ ವಹಿಸಿದ್ದರೂ ನಜೀಬ್ ನಾಪತ್ತೆ ಕೇಸ್ ಹಾಗೇ ಇದೆ. ಆದರೆ ವಿಪಕ್ಷಗಳ ಮುಖಂಡರ ಮನೆ ಮೇಲೆ ದಾಳಿ ನಡೆಸೋದಕ್ಕೆ ಸಿಬಿಐ ಇದ್ದಂಗಿದೆ ಅಂತ ದೂರಿದ್ದಾರೆ.
ಕಲಬುರಗಿಯಲ್ಲಿ ನಡೆದ ಸಮಾರಂಭದಲ್ಲಿ ಮೋದಿ ಹಾಗೂ ಕೇಂದ್ರ ಸರಕಾರದ ವಿರುದ್ಧ ಕನ್ನಯ್ಯ ಕಿಡಿಕಾರಿದ್ದಾರೆ.