‘ಮೋದಿ ಸ್ಲೋಗನ್ ಜೈ ಹಿಂದ್ ಅಲ್ಲ, Jio Hind ’

ಸೋಮವಾರ, 14 ಅಕ್ಟೋಬರ್ 2019 (17:20 IST)
ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದ ಕೊನೆಯಲ್ಲಿ ಜೈ ಹಿಂದ್ ಅಂತ ಹೇಳ್ತಾರೆ. ಆದರೆ ಮೋದಿ ಸ್ಲೋಗನ್ ವಿರುದ್ಧ ಆರೋಪಗಳು ಕೇಳಿಬರುತ್ತಿವೆ.

ಜೈಹಿಂದ್ ಅಂತಿದ್ದ ನರೇಂದ್ರ ಮೋದಿ ಈಗ ಜೈಹಿಂದ್ ಬದಲಾಗಿ ಜಿಯೋ ಹಿಂದ್ ಅಂತಿದ್ದಾರೆ. ಹೀಗಂತ ಸಿಪಿಐ (ಎಂ) ನ ನಾಯಕ ಸೀತಾರಾಮ್ ಯೆಚೂರಿ ಟೀಕೆ ಮಾಡಿದ್ದಾರೆ.

ಬಿಎಸ್ ಎನ್ ಎಲ್, ಎಂ ಟಿ ಎನ್ ಎಲ್ ಗಳು ವಿವಿಧ ಪ್ಲಾನ್ ಗಳನ್ನು ಬಂದ್ ಮಾಡುತ್ತಿವೆ. ಇದು ಮುಖೇಶ್ ಅಂಬಾನಿಯ ರಿಲಾಯನ್ಸ್ ಜಿಯೋಗೆ ವರದಾನವಾಗುತ್ತಿವೆ ಎಂದಿದ್ದಾರೆ.

ಆರ್ಥಿಕ ಹಿಂಜರಿತ, ನೋಟ್ ಬ್ಯಾನ್, ಜಿಎಸ್ ಟಿ ವಿಧಿಸಿರೋದ್ರಿಂದ ಆರ್ಥಿಕತೆ ಅಭಿವೃದ್ಧಿಯಾಗುತ್ತಿಲ್ಲ ಅಂತ ದೂರಿದ್ದಾರೆ.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ